alex Certify ಹೆಚ್ಚುತ್ತಿದೆ ಗಾಳಿ ಶುದ್ಧ ಮಾಡುವ ಉಪಕರಣಗಳ ಮಾರಾಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೆಚ್ಚುತ್ತಿದೆ ಗಾಳಿ ಶುದ್ಧ ಮಾಡುವ ಉಪಕರಣಗಳ ಮಾರಾಟ

ದೆಹಲಿಯ ವಾತಾವರಣ ತನ್ನ ಎಂದಿನ ಮಟ್ಟದ ಮಾಲಿನ್ಯಕ್ಕೆ ಮರಳುತ್ತಿರುವಂತೆಯೇ ರಾಜಧಾನಿಯಲ್ಲಿ ಗಾಳಿ ಶುದ್ಧ ಮಾಡುವ ಉಪಕರಣಗಳ ಮಾರಾಟದ ಭರಾಟೆ ಜೋರಾಗಿದೆ.

ದೀಪಾವಳಿಯ ಬಳಿಕ ಈ ಉಪಕರಣಗಳ ಮಾರಾಟದಲ್ಲಿ ತುರುಸು ಜೋರಾಗುವ ಕಾರಣ ಇವುಗಳ ಮಾರುಕಟ್ಟೆ ಗಾತ್ರವು 500 ಕೋಟಿ ರೂ.ಗಳ ಮೌಲ್ಯ ದಾಟಿದೆ. ದೇಶಾದ್ಯಂತ ಮಾರಾಟವಾಗುವ ವಾಯು ಶುದ್ಧೀಕರಣ ಉಪಕರಣಗಳ ಪೈಕಿ ಮುಕ್ಕಾಲು ಭಾಗ ದೆಹಲಿ ಹಾಗೂ ರಾಷ್ಟ್ರ ರಾಜಧಾನಿ ವ್ಯಾಪ್ತಿಯ ಪ್ರದೇಶದಲ್ಲೇ ಆಗುತ್ತವೆ.

ಶೀತ – ಕಫಕ್ಕೆ ಸೂಪರ್ ಮನೆ ಮದ್ದು: ಒಮ್ಮೆ ಈ ಔಷಧಿ ಉಪಯೋಗಿಸಿ ನೋಡಿ

ಈ ಮಾಸಕ್ಕೆ ಹೊಸ ಅವತರಣಿಕೆಗಳ ವಾಯು ಶುದ್ಧಕಗಳನ್ನು ಪರಿಚಯಿಸಿರುವ ಉತ್ಪಾದಕರು ಕೆಟ್ಟ ಗಾಳಿಯಿಂದ ಮಾತ್ರವಲ್ಲದೇ ಸಾರ್ಸ್ ಕೋವ್‌-2 ವೈರಾಣುಗಳಿಂದಲೂ ಸಹ ರಕ್ಷಣೆ ಒದಗಿಸುತ್ತವೆ.

ದೇಶಾದ್ಯಂತ ದೊಡ್ಡ ನಗರಗಳಲ್ಲಿ ವಾಯು ಶುದ್ಧಕಗಳ ಬಗ್ಗೆ ಗ್ರಾಹಕ ಅರಿವು ಹೆಚ್ಚುತ್ತಿರುವ ಜೊತೆಗೆ ಮಾಲಿನ್ಯ ಮಟ್ಟಗಳ ಕುರಿತಂತೆ ಸುದ್ದಿ ವಾಹಿನಿಗಳಲ್ಲಿ ಬಹಳಷ್ಟು ವರದಿಗಳು ಬಿತ್ತರಗೊಳ್ಳುತ್ತಿರುವ ಕಾರಣ ಈ ಉಪಕರಣಗಳ ಮಾರಾಟದಲ್ಲಿ ಭಾರೀ ಮಟ್ಟದ ಏರಿಕೆ ಕಂಡು ಬರುತ್ತಿದೆ.

15ಕ್ಕೂ ಹೆಚ್ಚಿನ ಬ್ರಾಂಡ್‌ಗಳಲ್ಲಿ ಸಿಗುವ ವಾಯು ಶುದ್ಧಕಗಳು 4,200 ರೂ.ಗಳಿಂದ 50,000 ರೂ.ಗಳವರೆಗೂ, ಗುಣಮಟ್ಟದ ಅನುಸಾರ ವಿವಿಧ ಮಟ್ಟದ ಬೆಲೆಗಳಲ್ಲಿ ಸಿಗುತ್ತವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...