
ದೇಶಾದ್ಯಂತ ಧಾರ್ಮಿಕ ಸ್ಥಳಗಳಿಗೆ ಸಂಚರಿಸುವ ರೈಲುಗಳಲ್ಲಿ ಶುದ್ಧ ಶಾಖಾಹಾರಿ ವ್ಯವಸ್ಥೆ ಇರಲಿದೆ.
ಐಆರ್ಸಿಟಿಸಿ ಸಹಯೋಗದಲ್ಲಿ ಶಾಖಾಹಾರಿ ರೈಲು ಸೇವೆಯಲ್ಲಿ ಆರಂಭಿಸಿರುವ ಸಾತ್ವಿಕ್ ಕೌನ್ಸಿಲ್ ಆಫ್ ಇಂಡಿಯಾ ಈ ಪ್ರಮಾಣಿಕರಣವನ್ನು ನೀಡುತ್ತಿದೆ.
ಈ ಪ್ರಮಾಣಿಕರಣವು ಕೇವಲ ರೈಲುಗಳಲ್ಲಿ ಸಿಗುವ ಶಾಖಾಹಾರಿ ಆಹಾರಗಳಿಗೆ ಸೀಮಿತವಾಗಿಲ್ಲ. ಬದಲಾಗಿ ಐಆರ್ಸಿಟಿಸಿ ಅಡುಗೆ ಕೋಣೆ, ಎಕ್ಸಿಕ್ಯೂಟಿವ್ ಲಾಂಜ್ಗಳು. ಬಜೆಟ್ ಹೋಟೆಲ್ ಸೇರಿದಂತೆ ಎಲ್ಲಾ ಕಡೆಯೂ ಶುದ್ಧ ಶಾಖಾಹಾರಿ ವ್ಯವಸ್ಥೆಯೇ ಇರಲಿದೆ.
ಈ ಸಿಂಪಲ್ ಟ್ರಿಕ್ ಬಳಸಿದರೆ ʼಮಗ್ಗಿʼ ಸಲೀಸು
ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಕೇವಲ ಸಸ್ಯಹಾರಿ ಊಟವನ್ನು ನೀಡುವ ಮೂಲಕ ಈ ಪ್ರಮಾಣಿಕರಣವನ್ನು ನೀಡಲಾಗೋದಿಲ್ಲ. ಅಡುಗೆ ಕೋಣೆಗೆ ಪ್ರವೇಶಿಸುವ ಪಾತ್ರೆ ಸೇರಿದಂತೆ ಯಾವುದೇ ಉತ್ಪನ್ನಗಳು ಸಹ ಸಸ್ಯಾಹಾರಿ ಎಂಬ ಚಿಹ್ನೆ ಹೊಂದಿದ್ದಲ್ಲಿ ಮಾತ್ರ ಅವುಗಳಿಗೆ ಅನುಮತಿ ಸಿಗಲಿದೆ. ಅಂದರೆ ಪಾತ್ರೆ ತೊಳೆಯುವ ಸೋಪು, ಬ್ರಶ್ ಇವೆಲ್ಲವೂ ಸಹ ಸಸ್ಯಹಾರಿ ಪಂಗಡಕ್ಕೆ ಸೇರಿರಬೇಕು.
ಇನ್ನು ಆಹಾರ ವಿತರಿಸುವವರು ಯಾವುದೇ ಕಾರಣಕ್ಕೂ ಮಾಂಸಾಹಾರವನ್ನು ಬಡಿಸೋದಿಲ್ಲ. ಅಡುಗೆ ಮನೆಯಲ್ಲಿ ತಯಾರಾದ ಶುದ್ಧ ಶಾಖಾಹಾರಿ ಆಹಾರವನ್ನೇ ನೀಡಲಿದ್ದಾರೆ.