ಮಗುವಿಗೆ ಜನ್ಮ ನೀಡೋದು ಅಂದರೆ ಸುಲಭದ ಮಾತಂತೂ ಅಲ್ಲವೇ ಅಲ್ಲ. ತಾಯಾಗುವವಳು ಸಾಕಷ್ಟು ಕಷ್ಟಗಳನ್ನು ಎದುರಿಸಿ ಮಗುವಿಗೆ ಜನ್ಮ ನೀಡುತ್ತಾಳೆ. ತಾಯಿಯಾದವಳಿಗೆ ಪ್ರತಿದಿನವೂ ಯುದ್ಧವೇ. ಈಗೀಗ ಗರ್ಭಿಣಿಯಾದವರಿಗೆ, ಬಾಣಂತಿಯರಿಗೆ ಸಾಕಷ್ಟು ಮಾಹಿತಿಗಳು ಸೋಶಿಯಲ್ ಮೀಡಿಯಾದಲ್ಲೇ ಸಿಕ್ಕಿ ಬಿಡುತ್ತದೆ.
ಅಲ್ಲದೇ ಈಗೆಲ್ಲ ಗಭಾವಸ್ಥೆ, ಬಾಣಂತಿ, ಎದೆ ಹಾಲು ಈ ವಿಚಾರಗಳ ಬಗ್ಗೆ ಮಾತನಾಡಲು ಯಾರೂ ನಾಚಿಕೆ ಭಾವ ವ್ಯಕ್ತಪಡಿಸೋದಿಲ್ಲ. ಹೀಗಾಗಿ ಅನೇಕರು ತಮ್ಮಲ್ಲಿರುವ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಸಬಹುದಾಗಿದೆ.
ಟಿಕ್ಟಾಕ್ನಲ್ಲಿ ಜೋ ಜಾನ್ಸನ್ ಎಂಬ ಹೆಸರಿನ ಮಹಿಳೆಯು ಹೊಸ ವಿಚಾರವೊಂದನ್ನು ಶೇರ್ ಮಾಡಿದ್ದಾರೆ. ಇತ್ತೀಚೆಗಷ್ಟೇ ಮಗುವಿಗೆ ಜನ್ಮ ನೀಡಿರುವ ಈಕೆ ತಾವು ಮಗುವಿಗೆ ಜನ್ಮ ನೀಡಿದ 6 ವಾರಗಳ ಬಳಿಕ ವಿಚಿತ್ರ ವಿಚಾರವೊಂದನ್ನು ಪತ್ತೆ ಮಾಡಿದ್ದಾರೆ. ಅದೇನೆಂದರೆ ಅವರ ಎದೆ ಹಾಲು ಬಿಳಿ ಬಣ್ಣದಲ್ಲಿ ಇರೋದ್ರ ಬದಲು ಗುಲಾಬಿ ಬಣ್ಣದಲ್ಲಿದೆ..!
ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿರುವ ಜಾನ್ಸನ್ ಎದೆಹಾಲಿನ ಬಣ್ಣ ಬದಲಾಗಲು ಕಾರಣ ಏನಿರಬಹುದು ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ಈ ಬಣ್ಣದ ಹಾಲನ್ನು ಮಗು ಕುಡಿದರೆ ಸಮಸ್ಯೆ ಇಲ್ಲವಾ ಎಂದೂ ಕೇಳಿದ್ದಾರೆ.
ಜೋರ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಶೇರ್ ಆಗ್ತಿದೆ. ಜಾನ್ಸನ್ ಎದೆಹಾಲು ನೋಡೋಕೆ ಥೇಟ್ ಸ್ಟ್ರಾಬೆರಿ ಮಿಲ್ಕ್ಶೇಕ್ನಂತೆ ಕಾಣುತ್ತಿದೆ. ಜಾನ್ಸನ್ರ ಈ ಸಮಸ್ಯೆಗೆ ಅನೇಕರು ಕಮೆಂಟ್ ಮೂಲಕ ಸಲಹೆ ನೀಡಿದ್ದಾರೆ. ಕೆಲವರು ಹೇಳುವಂತೆ ಎದೆಹಾಲಿನೊಂದಿಗೆ ರಕ್ತವೂ ಬರಲು ಆರಂಭಿಸಿದಾಗ ಈ ರೀತಿ ಹಾಲಿನ ಬಣ್ಣ ಬದಲಾಗುತ್ತದೆಯಂತೆ.
ಇದೇ ಸಮಸ್ಯೆಯಿಂದ ಬಳಲುತ್ತಿದ್ದ ಮಹಿಳೆಯೊಬ್ಬರು ಕಮೆಂಟ್ ಮಾಡಿದ್ದು, ಗುಲಾಬಿ ಬಣ್ಣದ ಎದೆಹಾಲು ಮಗುವಿಗೆ ಸುರಕ್ಷಿತ ಎಂದಿದ್ದಾರೆ. ಇದರಿಂದ ಮಗುವಿಗೆ ಯಾವುದೇ ಹಾನಿ ಇಲ್ಲ ಎಂದಿದ್ದಾರೆ.