ಸಾಗರ್ ಕೆ. ಚಂದ್ರ ನಿರ್ದೇಶನದ ಪವರ್ ಸ್ಟಾರ್ ಪವನ್ ಕಲ್ಯಾಣ್ ಅಭಿನಯದ ಬಹುನಿರೀಕ್ಷಿತ ‘ಭೀಮ್ಲಾ ನಾಯಕ್’ ಸಿನಿಮಾ ಮುಂದಿನ ವರ್ಷ ಜನವರಿ 12ರಂದು ತೆರೆಮೇಲೆ ಬರಲಿದೆ. ಈ ಕುರಿತು ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದೆ ಪವನ್ ಕಲ್ಯಾಣ್ ಚಿತ್ರವೆಂದರೇ ಪ್ರೇಕ್ಷಕರಲ್ಲಿ ನಿರೀಕ್ಷೆ ಹೆಚ್ಚಾಗೇ ಇರುತ್ತದೆ ಕರ್ನಾಟಕದಲ್ಲೂ ಪವನ್ ಕಲ್ಯಾಣ್ ಅಭಿಮಾನಿಗಳಿದ್ದಾರೆ.
ನಿಮ್ಮ ಮೊಬೈಲ್ ನಲ್ಲೂ ಇದ್ಯಾ ಈ ಅಪ್ಲಿಕೇಷನ್……? ಖಾತೆ ಖಾಲಿಯಾಗುವ ಮುನ್ನ ಎಚ್ಚೆತ್ತುಕೊಳ್ಳಿ
ಈಗಾಗಲೇ ಹಾಡುಗಳ ಮೂಲಕವೇ ಭರ್ಜರಿ ಸೌಂಡ್ ಮಾಡಿರುವ ಈ ಚಿತ್ರವನ್ನು ಸಿತಾರ ಎಂಟರ್ಟೈನ್ಮೆಂಟ್ಸ್ ಬ್ಯಾನರ್ ನಡಿ ಸೂರ್ಯದೇವರ ನಾಗವಂಶಿ ನಿರ್ಮಾಣ ಮಾಡಿದ್ದಾರೆ, ಪವನ್ ಕಲ್ಯಾಣ್ ಸೇರಿದಂತೆ ನಿತ್ಯಾ ಮೆನನ್, ರಾಣಾ ದಗ್ಗುಬಾಟಿ, ಸಂಯುಕ್ತ ಮೆನನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಎಸ್ ತಮನ್ ಸಂಗೀತ ಸಂಯೋಜನೆ ನೀಡಿದ್ದಾರೆ.