ದೃಢವಾದ ಕಾರಣವಿಲ್ಲದೇ ಕೊರೊನಾ ಲಸಿಕೆಯನ್ನು ಸ್ವೀಕರಿಸಲು ನಿರಾಕರಿಸಿದವರ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳಲು ಮಲೇಷಿಯಾ ಸರ್ಕಾರ ಮುಂದಾಗಿದೆ. ದೇಶದ ಆರೋಗ್ಯ ಸಚಿವಾಲಯವು ಈ ಸಂಬಂಧ ಹೊಸ ಯೋಜನೆಯೊಂದನ್ನು ಜಾರಿಗೆ ತರಲಿದ್ದು ಈ ಮೂಲಕ ಕೋವಿಡ್ 19 ಲಸಿಕೆ ಪಡೆಯದವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲಿದೆ.
BREAKING: ರಾಜ್ಯದಲ್ಲಿಂದು 349 ಜನರಿಗೆ ಕೊರೋನಾ ಸೋಂಕು ದೃಢ, 14 ಮಂದಿ ಸಾವು
ಇದನ್ನು ಹೇಳುತ್ತಿರೋದಕ್ಕೆ ಕ್ಷಮೆ ಇರಲಿ, ಆದರೆ ನೀವು ಬೇಕಂತಲೇ ಕೋವಿಡ್ ಲಸಿಕೆಯನ್ನು ಸ್ವೀಕರಿಸದೇ ಹೋದಲ್ಲಿ ನಿಮ್ಮ ಜೀವನವನ್ನು ಇನ್ನಷ್ಟು ಕಷ್ಟ ಮಾಡಲಿದ್ದೇವೆ ಎಂದು ಆರೋಗ್ಯ ಸಚಿವ ಕೈರಿ ಜಮಾಲುದ್ದೀನ್ ಹೇಳಿದ್ದಾರೆ.
ಹೊಸ ನಿಯಮಗಳ ಬಗ್ಗೆ ಹೆಚ್ಚೇನು ಮಾಹಿತಿಯನ್ನು ನೀಡದ ಸಚಿವ ಜಮಾಲುದ್ದೀನ್, ಕೋವಿಡ್ ಲಸಿಕೆಯನ್ನು ಪಡೆಯದ ಮಲೇಷಿಯನ್ನರು ಕಡ್ಡಾಯ ಕೋವಿಡ್ ಪರೀಕ್ಷೆಗಳಲ್ಲಿ ಹಣವನ್ನು ಪಾವತಿಸಬೇಕಾಗತ್ತದೆ ಎಂದು ಹೇಳಿದ್ದಾರೆ.
ಶಾಕಿಂಗ್: ಭಾರೀ ಮಳೆಯೊಂದಿಗೆ ಆಕಾಶದಿಂದ ಉದುರಿದ ಮೀನುಗಳು…..!
ಕೋವಿಡ್ ಲಸಿಕೆಯು ಮಲೇಷಿಯಾದಲ್ಲಿ ಕಡ್ಡಾಯವಲ್ಲದೇ ಇದ್ದರೂ ಸಹ, ಲಸಿಕೆ ಪಡೆಯದ ಅನೇಕರು ದೇಶದ ಅನೇಕ ಪ್ರಯೋಜನಗಳಿಂದ ವಂಚಿತರಾಗಲಿದ್ದಾರೆ. ಹೊಸ ನಿಯಮವು ಮಸೀದಿ ಪ್ರವೇಶ, ಹೋಟೆಲ್ ಹಾಗೂ ಅಂಗಡಿಗಳಿಗೆ ಭೇಟಿ ನೀಡಲು ನಿಷಿದ್ಧ ಹೇರುವುದನ್ನೂ ಮೀರಿದೆ ಎಂದು ಹೇಳಿದ್ದಾರೆ.
ವೈದ್ಯಕೀಯ ಕಾರಣವಿರುವ ಹಿನ್ನೆಲೆಯಲ್ಲಿ ಕೊರೊನಾ ಲಸಿಕೆ ಪಡೆಯದವರು ಈ ನಿಯಮಗಳಿಂದ ವಿನಾಯ್ತಿ ಪಡೆಯಲಿದ್ದಾರೆ ಎಂದು ಸಚಿವಾಲಯ ಹೇಳಿದೆ.