ವಂಚನೆಗಳನ್ನು ವರದಿ ಮಾಡುವಲ್ಲಿ ಹಿಂದೆ ಬಿದ್ದಿರುವ ಆರೋಪದ ಮೇಲೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್.ಬಿ.ಐ.)ಗೆ ಒಂದು ಕೋಟಿ ರೂಪಾಯಿಗಳ ದಂಡವನ್ನು ರಿಸರ್ವ್ ಬ್ಯಾಂಕ್ ವಿಧಿಸಿದೆ.
“ಬ್ಯಾಂಕಿನೊಂದಿಗೆ ಇರುವ ಗ್ರಾಹಕರೊಬ್ಬರ ಖಾತೆಯಿಂದ ಮಾಡಲಾದ ಪರೀಕ್ಷೆಯಲ್ಲಿ, ವಂಚನೆಗಳನ್ನು ವರದಿ ಮಾಡುವಲ್ಲಿ ಎಸ್.ಬಿ.ಐ. ಬಹಳ ನಿಧಾನ ಮಾಡುತ್ತಿದ್ದು, ಈ ಸಂಬಂಧ ಇರುವ ಮಾರ್ಗಸೂಚಿಗಳಿಗೆ ತಕ್ಕಂತೆ ಕೆಲಸ ಮಾಡುತ್ತಿಲ್ಲ,” ಎಂದು ಆರ್.ಬಿ.ಐ. ತಿಳಿಸಿದೆ.
ನಿರುದ್ಯೋಗಿಗಳಿಗೆ ಮಾಸಿಕ 3,500 ರೂ. ಭತ್ಯೆ ನೀಡುತ್ತಿದೆಯೇ ಮೋದಿ ಸರ್ಕಾರ..? ಇಲ್ಲಿದೆ ಸುದ್ದಿ ಹಿಂದಿನ ಅಸಲಿ ಸತ್ಯ
ಮಾರ್ಗಸೂಚಿಗಳನ್ನು ಪಾಲಿಸುವಲ್ಲಿ ವಿಫಲವಾದ ಸಂಬಂಧ ಎಸ್ಬಿಐಗೆ ಶೋಕಾಸ್ ನೋಟಿಸ್ ಕಳುಹಿಸಿರುವ ಆರ್.ಬಿ.ಐ., ಈ ಮಟ್ಟದ ದಂಡ ವಿಧಿಸುವುದು ಎಸ್.ಬಿ.ಐ. ಮಾಡಿಕೊಂಡಿರುವ ಎಡವಟ್ಟಿನ ಕಾರಣದಿಂದ ಅಗತ್ಯವಾಗಿದೆ ಎಂದಿದೆ.
ʼಆಧಾರ್ʼ ನಲ್ಲಿ ವಿಳಾಸದ ವಿವರ ಪರಿಷ್ಕರಿಸಲು ಇಲ್ಲಿದೆ ಮಾಹಿತಿ
“ನೋಟಿಸ್ಗೆ ಬ್ಯಾಂಕಿನ ಪ್ರತಿಕ್ರಿಯೆ ಹಾಗೂ ವೈಯಕ್ತಿಕ ಆಲಿಕೆ ವೇಳೆ ಬ್ಯಾಂಕಿನ ಕಡೆಯಿಂದ ಬಂದ ಸ್ಪಷ್ಟನೆಗಳನ್ನು ಪರಿಗಣಿಸಿ, ತನ್ನ ಮಾರ್ಗಸೂಚಿಗಳನ್ನು ಎಸ್.ಬಿ.ಐ. ಪಾಲಿಸಿಲ್ಲ ಎಂದು ಆರ್.ಬಿ.ಐ. ನಿರ್ಧರಿಸಿದ್ದು, ಹಣದ ರೂಪದ ದಂಡ ವಿಧಿಸುವುದು ವಾರೆಂಟೆಡ್ ಆಗಿದೆ” ಎಂದು ಆರ್.ಬಿ.ಐ. ತಿಳಿಸಿದೆ.