alex Certify 17 ವರ್ಷಗಳಿಂದ ಕಾಡಿನಲ್ಲೇ ವಾಸ, ಅಂಬಾಸಿಡರ್ ಕಾರೇ ಈತನ ಅರಮನೆ: ಸುಳ್ಯದ ವ್ಯಕ್ತಿಯ ಜೀವನಗಾಥೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

17 ವರ್ಷಗಳಿಂದ ಕಾಡಿನಲ್ಲೇ ವಾಸ, ಅಂಬಾಸಿಡರ್ ಕಾರೇ ಈತನ ಅರಮನೆ: ಸುಳ್ಯದ ವ್ಯಕ್ತಿಯ ಜೀವನಗಾಥೆ

ಮಂಗಳೂರು: ಕೇಳೋದಕ್ಕೆ ಇದು ಸಿನಿಮಾ ಕಥೆಯಂತೆ ನಿಮಗೆ ಭಾಸವಾಗಬಹುದು. ಆದರೆ, ಇದು ಕಥೆಯಲ್ಲ.. ಸುಮಾರು 17 ವರ್ಷಗಳಿಂದ ನಾಗರಿಕ ಸಮಾಜದಿಂದ ಬೇಸತ್ತು ಕಾಡಿನಲ್ಲಿ ಜೀವನ ಸಾಗಿಸುತ್ತಿರುವ ವ್ಯಕ್ತಿಯೊಬ್ಬನ ಜೀವನಗಾಥೆ.

ಹೌದು, 56 ವರ್ಷದ ವ್ಯಕ್ತಿಯೊಬ್ಬರು ತಮ್ಮ ಅಂಬಾಸಿಡರ್ ಕಾರಿನಲ್ಲಿ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಟ್ಟವಾದ ಕಾಡುಗಳ ನಡುವೆ ವಾಸಿಸುತ್ತಿದ್ದಾರೆ. ಹಾಲಿವುಡ್ ಚಿತ್ರ ಕಾಸ್ಟ್ ಅವೇ ರೀತಿಯಲ್ಲೇ ಈ ವ್ಯಕ್ತಿ ಜೀವನಬಂಡಿ ಎಳೆಯುತ್ತಿದ್ದಾರೆ. ದ.ಕ. ಜಿಲ್ಲೆಯ ಸುಳ್ಯ ತಾಲೂಕಿನ ಅರಂತೋಡು ಗ್ರಾಮದ ಅಡ್ತಲೆ-ನೆಕ್ಕರೆ ಕಾಡಿನೊಳಗೆ ಚಂದ್ರಶೇಖರ್ ವಾಸಿಸುತ್ತಿದ್ದಾರೆ.

ಕೇವಲ ಪಬ್​ಗಳನ್ನೇ ಸುತ್ತಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ ಈ ಮಹಾನುಭಾವ…..!

ಅವರ ಹಳೆಯ ಅಂಬಾಸಿಡರ್ ಕಾರನ್ನು ಕಾಡಿನ ಒಳಗೆ ನಿಲುಗಡೆ ಮಾಡಲಾಗಿದೆ. ಇದಕ್ಕೆ ಗುಡಿಸಲು ನಿರ್ಮಿಸಲಾಗಿದ್ದು, ಇಲ್ಲಿ ಅವರು ವಿಶ್ರಾಂತಿ ಪಡೆಯುತ್ತಾರೆ. ಕಾರಿನ ರೇಡಿಯೋದಿಂದ ಹಳೆಯ ಹಿಂದಿ ಹಾಡುಗಳನ್ನು ಕೇಳುತ್ತಾರೆ. ರಾತ್ರಿ ವೇಳೆ ಹಾಗೂ ವಿಶ್ರಾಂತಿ ಪಡೆಯಬೇಕು ಎಂದು ಅನಿಸಿದಾಗಲೆಲ್ಲಾ ಕಾರಿನಲ್ಲಿ ತನ್ನನ್ನು ತಾನು ಲಾಕ್ ಮಾಡಿಕೊಂಡು ಮಲಗುತ್ತಾರೆ.

ಇನ್ನು ಇವರಿಗೆ ಕಾಡು ಪ್ರಾಣಿಗಳು, ಹಾವುಗಳೆಂದರೆ ಭಯವೇ ಇಲ್ಲವಂತೆ. ಕಾಡು ಪ್ರಾಣಿಗಳಿಗಿಂತ ಮನುಷ್ಯರು ಹೆಚ್ಚು ವಿಷಕಾರಿ ಮತ್ತು ಅಪಾಯಕಾರಿ ಎಂಬುದು ಅರಣ್ಯವಾಸಿ ಚಂದ್ರಶೇಖರ್ ಅವರ ಮಾತು.

ನಿಮ್ಮ ʼಲಿವರ್‌ʼ ಬಗ್ಗೆ ಇರಲಿ ಜಾಗೃತಿ; ಈ ಲಕ್ಷಣಗಳಿದ್ದರೆ ಕೂಡಲೇ ವೈದ್ಯರನ್ನು ಕಾಣಿ

ಕಾಡಿನಲ್ಲಿ ವಾಸ ಯಾಕೆ..?

2003ರ ವರೆಗೆ ಚಂದ್ರಶೇಖರ್ ಸುಳ್ಯ ತಾಲೂಕಿನ ನೆಕ್ರಾಲ್ ಕೆಮ್ರಾಜೆ ಗ್ರಾಮದಲ್ಲಿ ಇತರ ಸಾಮಾನ್ಯ ಮನುಷ್ಯರಂತೆ ವಾಸಿಸುತ್ತಿದ್ದರು. ಅವರು 1.5 ಎಕರೆಗಳಷ್ಟು ಅಡಿಕೆ ತೋಟವನ್ನು ಕೂಡ ಹೊಂದಿದ್ದರು. ನೆಲ್ಲೂರು ಕೆಮ್ರಾಜೆ ಸಹಕಾರಿ ಸೊಸೈಟಿಯಿಂದ ಚಂದ್ರಶೇಖರ್ ಅಲ್ಪಾವಧಿ ಸಾಲ ಮತ್ತು ಎರಡು ಬೆಳೆ ಸಾಲಗಳನ್ನು ಪಡೆದ ನಂತರ ಅವರ ಜೀವನವು ತಿರುವು ಪಡೆದಿದೆ. ಸುತ್ತಮುತ್ತಲಿನ ಜನರಿಂದ ಅವರು ದಾರಿ ತಪ್ಪಿದ್ದರು ಮತ್ತು ಮೋಸ ಹೋಗಿದ್ದರು. ಹೀಗಾಗಿ ಸಾಲವನ್ನು ಮರುಪಾವತಿಸಲು ಸಾಧ್ಯವಾಗದ ಕಾರಣ, ಜೀವನೋಪಾಯಕ್ಕಾಗಿ ಗಳಿಸಿದ ಆತನ ಆಸ್ತಿಯನ್ನು ಹರಾಜು ಹಾಕಲಾಯಿತು.

ಇದರಿಂದ ಎದೆಗುಂದದ ಚಂದ್ರಶೇಖರ ನಂತರ ತನ್ನ ಸಹೋದರಿಯ ಬಳಿ ಹೋಗಿದ್ದಾರೆ. ಆದರೆ ಭಿನ್ನಾಭಿಪ್ರಾಯಗಳು ಹೆಚ್ಚಾದ ಕಾರಣ ಹೇಗೋ ಅಲ್ಲೂ ಸಂತೋಷವಾಗಿರಲು ಸಾಧ್ಯವಾಗಲಿಲ್ಲ. ಹೀಗಾಗಿ ಒಂದು ದಿನ ಅವರು ನಾಗರಿಕ ಪ್ರಪಂಚದಿಂದ ದೂರ ಹೋಗಲು ನಿರ್ಧರಿಸಿದ್ದರು. ತನ್ನ ಕಾರನ್ನು ಕಾಡಿನ ಕಡೆಗೆ ಚಲಾಯಿಸಿ ಅಲ್ಲಿಯೇ ಹೊಸ ಜೀವನವನ್ನು ಪ್ರಾರಂಭಿಸಿದ್ದಾರೆ.

ನವರಾತ್ರಿಯಂದು ರಹಸ್ಯ ದುರ್ಗಾ ಮಂತ್ರ ಹಂಚಿಕೊಂಡ ನಟಿ

ಕಾಡಿನಲ್ಲಿ ಹೇಗೆ ಬದುಕುತ್ತಾರೆ?

ಕೋವಿಡ್ ಸಮಯದಲ್ಲಿ ಹಳ್ಳಿಗಳನ್ನು ಮುಚ್ಚಿದಾಗ ಅವರು ಕಾಡಿನಲ್ಲಿ ಕಾಡು ಹಣ್ಣುಗಳನ್ನು ತಿನ್ನುವ ಮೂಲಕ ಬದುಕುಳಿದಿದ್ದಾರೆ. ಕಾಡಿನಲ್ಲಿ ಒಣಗಿದ ತೆವಳಿನಿಂದ ಮಾಡಿದ ತನ್ನ ಬುಟ್ಟಿಗಳನ್ನು ಮಾರಾಟ ಮಾಡಲು ತನ್ನ ಸೈಕಲ್‌ನಲ್ಲಿ ಹಳ್ಳಿಗಳಿಗೆ ಪ್ರಯಾಣಿಸುತ್ತಾರೆ. ಚಂದ್ರಶೇಖರ್ ಬಸವಳಿದವರಂತೆ ಕಂಡರೂ, ಒಂದು ದಿನ ತಮ್ಮ ಕೃಷಿ ಭೂಮಿಯನ್ನು ಮರಳಿ ಪಡೆಯುತ್ತೇನೆ ಎಂಬ ಭರವಸೆಯೊಂದಿಗೆ ಸುಸಜ್ಜಿತ, ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ. ತನ್ನ ಕೃಷಿ ಭೂಮಿಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಕಾರಿನಲ್ಲಿ ಹಾಗೆಯೇ ಇಟ್ಟಿದ್ದಾರೆ.

ಈ ಹಿಂದೆಯೇ ಜಿಲ್ಲಾಡಳಿತ ಕೂಡ ಕಾಡಿನಲ್ಲಿ ಅವರ ಏಕಾಂತ ಜೀವನವನ್ನು ಗಮನಿಸಿತ್ತು. ಆಗಿನ ಜಿಲ್ಲಾಧಿಕಾರಿಯಾಗಿದ್ದ ಎ.ಬಿ. ಇಬ್ರಾಹಿಂ ಅವರು ಚಂದ್ರಶೇಖರ್ ಅವರನ್ನು ಕೆಲವು ವರ್ಷಗಳ ಹಿಂದೆ ಭೇಟಿ ಮಾಡಿದ್ದರು. ಜಿಲ್ಲಾಡಳಿತವು ಈತನಿಗಾಗಿ ಮನೆ ನಿರ್ಮಿಸಿತ್ತು. ರಬ್ಬರ್ ಕಾಡನ್ನೆ ಇವರಿಗೆ ಜಾಗ ಎಂದು ಕೊಟ್ಟಿದ್ದರು. ಆದರೆ ಅದು ಹಿಡಿಸದ ಚಂದ್ರಶೇಖರ್ ಮತ್ತೆ ಕಾಡಿಗೆ ಮರಳಿ ತನ್ನ ಅದೇ ಜಾಗದಲ್ಲಿ ವಾಸಿಸಲು ಅರಂಭಿಸಿದ್ದರು.

ವನ್ಯಜೀವಿ ಪ್ರೇಮಿ 

ರಾತ್ರಿಯಲ್ಲಿ ಆನೆಗಳು, ಚಿರತೆ, ಕಾಡುಹಂದಿಗಳು ಮತ್ತು ಕಾಡೆಮ್ಮೆ ಸೇರಿದಂತೆ ಹೆಚ್ಚಿನ ಕಾಡು ಪ್ರಾಣಿಗಳು ಇಲ್ಲಿಗೆ ಬರುತ್ತವೆ. ಆದರೆ, ಅವುಗಳಿಂದ ತನಗೇನು ಅಪಾಯವಾಗಿಲ್ಲ ಎಂದು ಚಂದ್ರಶೇಖರ್ ಹೇಳಿದ್ದಾರೆ. ಇನ್ನು, ಚಂದ್ರಶೇಖರ್ ಅವರು ಕಾಡೊಳಗೆ ವಾಸವಿದ್ದರೂ ಪ್ರಕೃತಿಗೆಂದೂ ಅಪಚಾರವೆಸಗಿಲ್ಲ. ಇದಕ್ಕಾಗಿ ಅರಣ್ಯ ಇಲಾಖೆಯ ಅಧಿಕಾರಿಗಳು ಆತನನ್ನು ಕಾಡಿನಲ್ಲಿ ಜೀವನ ನಡೆಸಲು ಬಿಟ್ಟಿದ್ದಾರೆ. “ನಾನು ಸಣ್ಣ ಪೊದೆ ಸಸ್ಯವನ್ನು ಕತ್ತರಿಸುವುದಿಲ್ಲ, ನನ್ನ ಸುತ್ತಲೂ ಇರುವ ಯಾವುದನ್ನೂ ನಾನು ಹಸ್ತಕ್ಷೇಪ ಮಾಡುವುದಿಲ್ಲ. ನಾನು ಕಾಡಿನಲ್ಲಿ ನನ್ನ ಸ್ಥಳಕ್ಕೆ ಹತ್ತಿರವಿರುವ ನದಿಯಲ್ಲಿ ಸ್ನಾನ ಮಾಡುತ್ತೇನೆ. ನಾನು ಅಕ್ಕಿಯನ್ನು ಬೇಯಿಸುತ್ತೇನೆ ಮತ್ತು ಆಕಾಶವಾಣಿಯಲ್ಲಿ ಹಿಂದಿ ಹಾಡುಗಳನ್ನು ಕೇಳುತ್ತೇನೆ” ಎಂದು ಚಂದ್ರಶೇಖರ್ ತಿಳಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...