ವಿಮಾನದಲ್ಲಿ ಹೆರಿಗೆ ಎನ್ನುವ ಸುದ್ದಿಗಳನ್ನ ನಾವು ಆಗಾಗ ಕೇಳ್ತಿರ್ತೇವೆ. ಮಂಗಳವಾರ, ಲಂಡನ್ ನಿಂದ ಕೊಚ್ಚಿಗೆ ಬರ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಗಂಡು ಮಗು ಜನಿಸಿದೆ. ಸಾಮಾನ್ಯವಾಗಿ ಯಾವ ದೇಶದಲ್ಲಿ ಮಗು ಜನಿಸಿದೆಯೋ ಆ ದೇಶದ ಪೌರತ್ವ ಮಗುವಿಗೆ ಸಿಗುತ್ತದೆ. ವಿಮಾನದಲ್ಲಿ ಮಗು ಜನಿಸಿದ್ರೆ ಯಾವ ದೇಶದ ಪೌರತ್ವ ಸಿಗಬಹುದು ಎಂಬ ಪ್ರಶ್ನೆ ಅನೇಕರನ್ನು ಕಾಡುವುದು ಸಹಜ.
ಭಾರತದಲ್ಲಿ ಗರ್ಭಿಣಿಯರಿಗೆ ಸಂಬಂಧಿಸಿದಂತೆ ಒಂದು ನಿಯಮವಿದೆ. 7 ತಿಂಗಳ ನಂತ್ರ ಗರ್ಭಿಣಿಯರಿಗೆ ವಿಮಾನ ಪ್ರಯಾಣ ನಿಷಿದ್ಧ. ಕೆಲವು ವಿಶೇಷ ಸಂದರ್ಭಗಳಲ್ಲಿ ಮಾತ್ರ ವಿಮಾನ ಪ್ರಯಾಣಕ್ಕೆ ಅವಕಾಶ ನೀಡಲಾಗುತ್ತದೆ.
ರೇವ್ ಪಾರ್ಟಿ ಎಂದರೇನು….? ಇಲ್ಲಿದೆ ಅದರ ಇತಿಹಾಸ
ವಿಮಾನದಲ್ಲಿ ಮಗು ಜನಸಿದ್ರೆ ಪೌರತ್ವ ನೀಡುವ ಮೊದಲು, ಮಗು ಜನಿಸುವಾಗ ವಿಮಾನ ಎಲ್ಲಿತ್ತು ಎಂಬುದನ್ನು ನೋಡಲಾಗುತ್ತದೆ. ವಿಮಾನದಿಂದ ಇಳಿದ ನಂತರ, ಮಗುವಿನ ಜನನ ಪ್ರಮಾಣಪತ್ರಕ್ಕೆ ಸಂಬಂಧಿಸಿದ ದಾಖಲೆಗಳನ್ನು ಆ ದೇಶದ ವಿಮಾನ ನಿಲ್ದಾಣ ಪ್ರಾಧಿಕಾರದಿಂದ ಪಡೆಯಬೇಕು. ಅದೇ ದೇಶದ ಪೌರತ್ವ ಪಡೆಯಬೇಕೆಂಬ ನಿಯಮವಿಲ್ಲ. ಮಗು ತನ್ನ ಹೆತ್ತವರ ರಾಷ್ಟ್ರೀಯತೆಯನ್ನು ಪಡೆಯಬಹುದು.
ಇವರೇ ನೋಡಿ ವಿಶ್ವದಲ್ಲೇ ಅತಿ ಉದ್ದದ ಮೂಗು ಹೊಂದಿರುವ ವ್ಯಕ್ತಿ..!
ಉದಾಹರಣೆಗೆ ವಿಮಾನ ಪಾಕಿಸ್ತಾನದಿಂದ ಅಮೆರಿಕಾಕ್ಕೆ ಹೋಗ್ತಿದೆ ಎಂದಿಟ್ಟುಕೊಳ್ಳಿ. ಭಾರತದ ಗಡಿ ಹಾದು ಹೋಗುವಾಗ ಮಗು ಜನಿಸುತ್ತದೆ. ಆಗ ಮಗುವಿನ ಜನ್ಮ ಸ್ಥಳವನ್ನು ಭಾರತವೆಂದು ಪರಿಗಣಿಸಲಾಗುತ್ತದೆ. ಆ ಮಗು, ಭಾರತದ ಪೌರತ್ವ ಪಡೆಯಬಹುದು. ಆದ್ರೆ ಪಾಲಕರ ಪೌರತ್ವ ಹಾಗೂ ಪೋಷಕರ ದೇಶದ ಪೌರತ್ವ ಎರಡನ್ನೂ ಭಾರತದಲ್ಲಿ ನೀಡಲಾಗುವುದಿಲ್ಲ. ಭಾರತದಲ್ಲಿ ಉಭಯ ಪೌರತ್ವಕ್ಕೆ ಅವಕಾಶವಿಲ್ಲ.
ಆದ್ರೆ ಬೇರೆ ಬೇರೆ ದೇಶದಲ್ಲಿ ಬೇರೆ ಬೇರೆ ನಿಯಮವಿದೆ. ಅಮೆರಿಕಾದಲ್ಲಿ ಉಭಯ ಪೌರತ್ವಕ್ಕೆ ಅವಕಾಶವಿದೆ. ಕೆಲ ವರ್ಷಗಳ ಹಿಂದೆ ವಿಮಾನದಲ್ಲಿ ಜನಿಸಿದ್ದ ಮಗುವಿಗೆ ಅಮೆರಿಕಾ ಹಾಗೂ ನೆದರ್ಲ್ಯಾಂಡ್ಸ್ ಎರಡರ ಪೌರತ್ವವೂ ಸಿಕ್ಕಿದೆ.