ತಮಿಳು ಸೂಪರ್ಸ್ಟಾರ್ ವಿಜಯ್ ಬೀಸ್ಟ್ ಸಿನಿಮಾ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ. ವಿಜಯ್ ಮುಂದಿನ ಸಿನಿಮಾ ದಳಪತಿ 66 ಸಿನಿಮಾವನ್ನು ನಿರ್ದೇಶಕ ಪೈದಪಲ್ಲಿ ನಿರ್ದೇಶಿಸುತ್ತಿದ್ದು ವಿವಿಧ ಕಾರಣಕ್ಕೆ ಈ ಸಿನಿಮಾ ಸುದ್ದಿಯಾಗುತ್ತಲೇ ಇದೆ. ದಳಪತಿ 66 ಏಕಕಾಲದಲ್ಲಿ ತೆಲಗು ಹಾಗೂ ತಮಿಳು ಭಾಷೆಯಲ್ಲಿ ತೆರೆ ಕಾಣಲಿದೆ. ಸದ್ಯಕ್ಕೆ ಸಿಕ್ಕಿರುವ ಇಂಟರೆಸ್ಟಿಂಗ್ ಮಾಹಿತಿ ಏನೆಂದರೆ ದಳಪತಿ 66 ಸಿನಿಮಾದಲ್ಲಿ ವಿಜಯ್ ಜೊತೆ ಮಹೇಶ್ ಬಾಬು ಪುತ್ರಿ ಸಿತಾರಾ ನಟಿಸಲಿದ್ದಾರೆ ಎನ್ನಲಾಗಿದೆ.
ಧಾರಾವಾಹಿ ನೋಡಲು ಬಿಡದ ಮಗಳಿಗೆ ತಾಯಿ ಬೈದ ಪರಿ ಕಂಡು ನೆಟ್ಟಿಗರು ಫಿದಾ..!
ದಳಪತಿ 66 ಚಿತ್ರತಂಡ ಸದ್ಯ ಪ್ರಿಪ್ರೊಡಕ್ಷನ್ನಲ್ಲಿ ಬ್ಯುಸಿಯಾಗಿದೆ. ಬೀಸ್ಟ್ ಸಿನಿಮಾ ಚಿತ್ರೀಕರಣ ಮುಗಿಯುತ್ತಿದ್ದಂತೆಯೇ ವಿಜಯ್ ದಳಪತಿ 66 ಸಿನಿಮಾ ಸೆಟ್ಗೆ ಆಗಮಿಸ್ತಾರೆ ಎನ್ನಲಾಗಿದೆ.
ಮಹೇಶ್ ಬಾಬು ಪುತ್ರಿ ಈ ಸಿನಿಮಾದಲ್ಲಿ ನಟಿಸುತ್ತಾರೆ ಎಂಬುದರ ಹೊರತಾಗಿ ನಟ ಪ್ರಕಾಶ್ ರಾಜ್ ಕೂಡ ಈ ಚಿತ್ರತಂಡ ಸೇರಿಕೊಳ್ತಾರೆ ಎಂಬ ವದಂತಿ ಕೂಡ ಇದೆ. ಈ ಮೂಲಕ ಪ್ರಕಾಶ್ ರಾಜ್ ಹಾಗೂ ವಿಜಯ್ 12 ವರ್ಷಗಳ ಬಳಿಕ ಈ ಸಿನಿಮಾದಲ್ಲಿ ಒಂದಾಗಲಿದ್ದಾರೆ ಎನ್ನಲಾಗಿದೆ. ಇವರಿಬ್ಬರು ಕೊನೆಯ ಬಾರಿಗೆ 2009ರಲ್ಲಿ ಫ್ಲಿಕ್ ವಿಲ್ಲು ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ್ದರು.
ಹೊಸ ವಾಹನ ಖರೀದಿ ಮಾಡುವವರಿಗೊಂದು ಗುಡ್ ನ್ಯೂಸ್…..! ಇದ್ರಲ್ಲಿ ಸಿಗ್ತಿದೆ ಶೇ.25ರಷ್ಟು ರಿಯಾಯಿತಿ
ದಳಪತಿ 66 ಸಿನಿಮಾದ ಬಗ್ಗೆ ಕಳೆದ ತಿಂಗಳು ಘೋಷಣೆ ಮಾಡಲಾಗಿದೆ. ಅಂದಹಾಗೆ ಇದು ಈ ಸಿನಿಮಾದ ನಿಜವಾದ ಹೆಸರಲ್ಲ. ಇದು ವಿಜಯ್ ನಟನೆಯ 66ನೇ ಸಿನಿಮಾ ಆಗಿರೋದ್ರಿಂದ ದಳಪತಿ 66 ಎಂಬ ಹೆಸರನ್ನು ತಾತ್ಕಾಲಿಕವಾಗಿ ಇಡಲಾಗಿದೆ. ಈ ಸಿನಿಮಾಗೆ ದಿಲ್ ರಾಜು ಬಂಡವಾಳ ಹೂಡಲಿದ್ದಾರೆ. ಈ ಸಿನಿಮಾದ ನಾಯಕಿಯ ಪಾತ್ರಕ್ಕೆ ಕಿಯಾರಾ ಅಡ್ವಾಣಿ, ರಶ್ಮಿಕಾ ಮಂದಣ್ಣ ಹಾಗೂ ಕೀರ್ತಿ ಸುರೇಶ್ ಹೆಸರು ಕೇಳಿ ಬರ್ತಿದೆ. ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.