ರಾಮನಗರ; ದೇಶದ ಆಡಳಿತ ವ್ಯವಸ್ಥೆಯಲ್ಲಿ ಆರ್.ಎಸ್.ಎಸ್. ಆರ್ಭಟ ಹೆಚ್ಚುತ್ತಿದೆ. ನಾಲ್ಕು ಸಾವಿರ ಸಿವಿಲ್ ಸರ್ವೆಂಟ್ ಗಳು ಆರ್.ಎಸ್.ಎಸ್. ಹಾಗೂ ಬಿಜೆಪಿ ಕಾರ್ಯಕರ್ತರಾಗಿದ್ದಾರೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
BIG NEWS: 1997 ರ ಬಳಿಕ ಗರಿಷ್ಠ ಮಳೆ ದಾಖಲಿಸಿದ ರಾಜಧಾನಿ ಬೆಂಗಳೂರು
ರಾಮನಗರದ ಕೇತಗಾನಹಳ್ಳಿಯಲ್ಲಿ ನಡೆಯುತ್ತಿರುವ ಜೆಡಿಎಸ್ ಕಾರ್ಯಾಗಾರದಲ್ಲಿ ಮಾತನಾಡಿದ ಕುಮಾರಸ್ವಾಮಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ದೇಶದಲ್ಲಿರುವ 4 ಸಾವಿರ ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳು ಆರ್.ಎಸ್.ಎಸ್. ಕಾರ್ಯಕರ್ತರು. ಬಿಜೆಪಿ ಕಾರ್ಯಕರ್ತರು ಎಂದರೆ ಆರ್.ಎಸ್.ಎಸ್. ಕಾರ್ಯಕರ್ತರು ಎಂದರ್ಥ. ಆರ್.ಎಸ್.ಎಸ್. ಕಾರ್ಯಕರ್ತರಿಗೆ ಐಎಎಸ್, ಐಪಿಎಸ್ ಆಗಲು ಟ್ರೇನಿಂಗ್ ನೀಡಲಾಗುತ್ತಿದೆ ಎಂದು ಕಿಡಿಕಾರಿದರು.
ಬೀದಿ ನಾಯಿಗೆ ಕಲ್ಲು ಎಸೆದವರ ವಿರುದ್ಧ ಠಾಣೆ ಮೆಟ್ಟಿಲೇರಿದ ದಂಪತಿ….!
2016ರಲ್ಲಿ ಒಂದೇ ವರ್ಷದಲ್ಲಿ 676 ಆರ್.ಎಸ್.ಎಸ್. ಕಾರ್ಯಕರ್ತರು ಪಾಸ್ ಆಗಿದ್ದಾರೆ. ಬೇರೆ ಬೇರೆ ಇನ್ ಸ್ಟಿ ಟ್ಯೂಟ್ ಗಳಲ್ಲಿ ತಮ್ಮದೇ ಟೀಮ್ ಇಟ್ಟು ಕಾರ್ಯಕರ್ತರಿಗೆ ಮಾತ್ರ ಟ್ರೇನಿಂಗ್ ನೀಡುವಂತೆ ಮಾಡುತ್ತಿದ್ದಾರೆ. ಈ ರೀತಿ ಆರ್.ಎಸ್.ಎಸ್ ಹಿಡಿತದಲ್ಲಿಟ್ಟುಕೊಂಡು ದೇಶದ ಆಡಳಿತ ವ್ಯವಸ್ಥೆಯನ್ನು ಬೇರೆ ದಿಕ್ಕಿನತ್ತ ಕೊಂಡೊಯ್ಯುವ ಹಿಡನ್ ಅಜೆಂಡಾ ನಡೆಯುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿಗೆ ಮತ್ತೂಂದು ಶಾಕ್: ಪಕ್ಷ ತೊರೆದು ಟಿಎಂಸಿ ಸೇರ್ಪಡೆಗೆ ಮುಂದಾದ ಶಾಸಕ
ಆರ್ ಎಸ್ ಎಸ್ ನ ಸಂಘಟನೆಗಳಿಂದಾಗಿ ಬಿಜೆಪಿ ಸರ್ಕಾರ ಎಂಬ ಹೆಸರಿನ ಸರ್ಕಾರ ರಚನೆ ಮಾಡಿಕೊಂಡಿದ್ದಾರೆ. ಇಲ್ಲಿರುವ ಬೊಮ್ಮಾಯಿ ಸರ್ಕಾರವಾಗಲಿ, ಕೇಂದ್ರದಲ್ಲಿರುವ ಪ್ರಧಾನಿ ಮೋದಿ ಸರ್ಕಾರವಾಗಲಿ ಬಿಜೆಪಿ ಸರ್ಕಾರವಲ್ಲ, ಆರ್.ಎಸ್.ಎಸ್ ಸರ್ಕಾರ. ಎಲ್.ಕೆ.ಅಡ್ವಾಣಿ, ಮುರಳಿ ಮನೋಹರ ಜೋಶಿಯವರಂತಹ ನಾಯಕರನ್ನು ಮನೆಗೆ ಕಳುಹಿಸಿದರು. ಇದೆಲ್ಲದರ ಹಿಂದೆ ಆರ್.ಎಸ್.ಎಸ್ ನಾಯಕರ ಕೈವಾಡವಿದೆ ಎಂದು ಗುಡುಗಿದರು.
ಇಂದು ದೇಶದಲ್ಲಿ ಹಿಂದುತ್ವಕ್ಕಾಗಿ ಆಡಳಿತ ನಡೆಸುವುದಲ್ಲ, ದುಡಿಯುವ ಕೈಗಳಿಗೆ ಕೆಲಸ ನೀಡಬೇಕಾಗಿದೆ. ಆದರೆ ಯುವಜನರನ್ನು, ಬಡವರನ್ನು ದಾರಿ ತಪ್ಪಿಸಿ ಅವರನ್ನು ದುರುಪಯೋಗಪಡಿಸಿಕೊಂಡು ದೇಶದಲ್ಲಿ ಶಾಂತಿಯನ್ನು ಕದಡುವ ಪ್ರಯತ್ನ ಮಾಡುತ್ತಿದ್ದಾರೆ ಇವರು. ಸರ್ವಜನಾಂಗದ ಶಾಂತಿಯ ತೋಟದಂತಿರುವ ರಾಜ್ಯದಲ್ಲಿ ಅಶಾಂತಿ ಉಂಟಾಗಬಾರದು, ಬಡ ಜನರಿಗೆ, ದುಡಿಯುವ ಕೈಗಳಿಗೆ ಕೆಲಸ ಸಿಗಬೇಕು, ಸರ್ಕಾರದ ಯೋಜನೆಗಳು ತಲುಪಬೇಕು ಎಂಬುದು ನಮ್ಮ ಉದ್ದೇಶ ಎಂದು ಹೇಳಿದರು.