ಪ್ರಧಾನ ಮಂತ್ರಿ ನರೇಂದ್ರ ಮೋದಿ ಇತ್ತೀಚೆಗೆ ಅಮೆರಿಕ ಪ್ರವಾಸಕ್ಕೆ ತೆರಳಿದ್ದ ಸಂದರ್ಭದಲ್ಲಿ 157 ಪ್ರಾಚ್ಯ ವಸ್ತುಗಳನ್ನು ಅಲ್ಲಿನ ಸರ್ಕಾರ ಭಾರತಕ್ಕೆ ಮರಳಿಸಿದೆ.
1970ರಿಂದ 2000ನೇ ಇಸವಿವರೆಗೂ ವಿದೇಶಗಳಲ್ಲಿ ಇದ್ದ ತನ್ನದೇ ಆದ 19ರಷ್ಟು ಪ್ರಾಚ್ಯವಸ್ತುಗಳನ್ನು ಮರಳಿ ಪಡೆದ ಭಾರತ 2000-2013ರ ನಡುವಿನ ಅವಧಿಯಲ್ಲಿ ಒಂದೇ ಒಂದು ಆಂಟಿಕ್ ವಸ್ತುವನ್ನು ಪಡೆಯಲು ಸಾಧ್ಯವಾಗಿರಲಿಲ್ಲ. 2013-2021ರ ಆಗಸ್ಟ್ ನಡುವೆ 53ರಷ್ಟು ಪ್ರಾಚ್ಯವಸ್ತುಗಳನ್ನು ವಿದೇಶಗಳಿಂದ ಭಾರತ ಮರಳಿ ಪಡೆದಿದೆ.
ಬಸ್ ಮೇಲೆ ದಾಳಿಗೆ ಮುಂದಾದ ಆನೆ: ಚಾಲಕನ ಸಮಯಪ್ರಜ್ಞೆಯಿಂದ ಉಳಿಯಿತು ಪ್ರಯಾಣಿಕರ ಪ್ರಾಣ
ಕಳೆದ ಒಂದೇ ವಾರದಲ್ಲಿ 157 ಆಂಟಿಕ್ ವಸ್ತುಗಳನ್ನು ಭಾರತ ಮರಳಿ ಪಡೆದಿದೆ ಎಂದು ಭಾರತೀಯ ಪಾರಂಪರಿಕ ವಸ್ತುಗಳನ್ನು ಸಂರಕ್ಷಿಸುವ ಕೆಲಸ ಮಾಡುವ ಇಂಡಿಯಾ ಪ್ರೈಡ್ ಪ್ರಾಜೆಕ್ಟ್ ತಿಳಿಸಿದೆ. ವಿದೇಶಗಳಿಗೆ ಕದ್ದೊಯ್ಯಲಾದ ಭಾರತೀಯ ಪರಂಪರೆಯ ಈ ಅತ್ಯಮೂಲ್ಯ ವಸ್ತುಗಳನ್ನು ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಮರಳಿ ಪಡೆಯುವ ವಿಶ್ವಾಸ ಇಂಡಿಯಾ ಪ್ರೈಡ್ನದ್ದಾಗಿದೆ.
ಅಕ್ರಮ ಮಾರಾಟದ ಮೂಲಕ ಈ 157 ಪ್ರಾಚ್ಯವಸ್ತುಗಳನ್ನು ಪಡೆದುಕೊಂಡಿದ್ದ ಕಳ್ಳಸಾಗಾಟಗಾರರು/ಡೀಲರ್ಗಳು/ಕಳ್ಳರು/ವಸ್ತು ಪ್ರದರ್ಶನಕಾರರಿಂದ ಮರಳಿ ಪಡೆಯಲಾಗಿದೆ ಎನ್ನುವ ಇಂಡಿಯಾ ಪ್ರೈಡ್ನ ಸಹ-ಸ್ಥಾಪಕ ವಿಜಯ್ ಕುಮಾರ್ ಎಸ್, “ನಮ್ಮ ಕೆಲಸ ಹಾಗೂ ಸಹಯೋಗವು ಮುಖ್ಯವಾಗಿ ಅಮೆರಿಕದ ವಲಸೆ ಹಾಗೂ ಕಸ್ಟಮ್ಸ್ ಜಾರಿ ಇಲಾಖೆ, ಆಂತರಿಕ ಭದ್ರತಾ ಇಲಾಖೆ ಹಾಗೂ ಭಾರತೀಯ ಅಧಿಕಾರಿಗಳೊಂದಿಗೆ ಇದೆ. ಕಳ್ಳಸಾಗಾಟಗಾರರಿಂದ ವಶಕ್ಕೆ ಪಡೆಯಲಾದ ಚಿತ್ರಗಳನ್ನು ಅಧಿಕಾರಿಗಳು ನಮಗೆ ಕಳುಹಿಸುತ್ತಾರೆ. ಈ ಚಿತ್ರಗಳನ್ನು ಬಳಸಿಕೊಂಡು ಸುದೀರ್ಘಾವಧಿಯ ಪ್ರಕ್ರಿಯೆಗಳ ಮೂಲಕ ನಮ್ಮಲ್ಲಿರುವ ಹಳೆಯ ದಾಖಲೆಗಳೊಂದಿಗೆ ಹೋಲಿಕೆ ಮಾಡುತ್ತೇವೆ. ಪಕ್ಕಾ ಸಾಕ್ಷ್ಯಗಳನ್ನು ಹೆಕ್ಕಿ ತೆಗೆದ ಬಳಿಕ ಅಧಿಕಾರಗಳಿಗೆ ಆ ವಸ್ತುಗಳನ್ನು ಮರಳಿಸಲು ಕೋರುತ್ತೇವೆ,” ಎನ್ನುತ್ತಾರೆ.
ಕೋವಿಡ್ ಮರಣ: ಬಿಪಿಎಲ್ ಕುಟುಂಬಕ್ಕೆ 1 ಲಕ್ಷ ರೂ. ಪರಿಹಾರಕ್ಕಾಗಿ ಅರ್ಜಿ ಆಹ್ವಾನ
ಮರಳಿ ಪಡೆಯಲಾದ ಈ 157 ಪ್ರಾಚ್ಯ ವಸ್ತುಗಳ ಪೈಕಿ, ಚೋಳ ಕಂಚಿನ ನಟರಾಜ ಪುತ್ಥಳಿ, ಒಡಿಶಾದ ದಕ್ಷಿಣ ಚಂಡಿ ದೇಗುಲ, ಅಳಿಂಗನ ಕಂಚಿನ ಮೂರ್ತಿ ಸೇರಿದಂತೆ ತಮಿಳುನಾಡಿನ ಅನೇಕ ಕಡೆಗಳ ಪುರಾತನ ವಸ್ತುಗಳು ಹಾಗೂ ಮಧ್ಯ ಪ್ರದೇಶಕ್ಕೆ ಸೇರಿದ ಒಂದಷ್ಟು ವಸ್ತುಗಳೂ ಸೇರಿವೆ.