ಸ್ಪೇನ್ ನ ಕ್ಯಾನರಿ ದ್ವೀಪಗಳಲ್ಲಿ 50 ವರ್ಷಗಳಲ್ಲೇ ಇದೇ ಮೊದಲ ಬಾರಿಗೆ ಜ್ವಾಲಾಮುಖಿ ಸ್ಫೋಟಗೊಂಡಿದೆ. ಮನೆಗಳೆಲ್ಲಾ ನಾಶವಾಗಿದೆ. ಆದರೆ, ವಿಚಿತ್ರ ಎಂಬಂತೆ ಒಂದು ಮನೆ ಮಾತ್ರ ಹಾನಿಯಾಗದೆ ಉಳಿದುಕೊಂಡಿದ್ದು, ಇದನ್ನು ‘ಪವಾಡ ಮನೆ’ ಅಂತಾ ಕರೆಯಲಾಗಿದೆ. ಈ ಮನೆಯ ಫೋಟೋ ಇದೀಗ ಭಾರಿ ವೈರಲ್ ಆಗಿದೆ.
ಜ್ವಾಲಾಮುಖಿಯಿಂದ ಟಕಾಂಡೆಯಲ್ಲಿರುವ ಲಾ ಪಾಲ್ಮಾ ದ್ವೀಪದಲ್ಲಿ ಹಲವಾರು ಮನೆಗಳು ನಾಶಗೊಂಡಿವೆ. ಬೃಹತ್ ಪ್ರಮಾಣದ ಲಾವಾಗಳು ವಸತಿ ಪ್ರದೇಶಗಳ ತುಂಬಾ ಹರಡಿಕೊಂಡಿದ್ದು, ಎತ್ತ ನೋಡಿದ್ರೂ ಕಪ್ಪು ದ್ರವ್ಯರಾಶಿಯೇ ಕಾಣುತ್ತದೆ.
ಶಾಕಿಂಗ್: ಮಾವುತನನ್ನು ಏಕಾಏಕಿ ನೆಲಕ್ಕೆ ಕೆಡವಿದ ಆನೆ..!
ದ್ವೀಪದಿಂದ ಸಾವಿರಾರು ಜನರನ್ನು ಸ್ಥಳಾಂತರಿಸಲಾಗಿದೆ. ಎತ್ತ ನೋಡಿದ್ರೂ ಸುಟ್ಟಂತೆ ಕಾಣುವ ಪರಿಸರದ ಮಧ್ಯೆ ಕಂದು ಛಾವಣಿಯ ಎತ್ತರವಿರುವ ಒಂದು ಮನೆ ಮಾತ್ರ ಉಳಿದುಕೊಂಡಿರುವುದು ವಿಶೇಷ. ಡ್ರೋನ್ ಕ್ಯಾಮರಾದಲ್ಲಿ ಈ ಮನೆಯ ದೃಶ್ಯ ಸೆರೆಯಾಗಿದೆ.
ಲಾವಾದಿಂದ ಸ್ಪರ್ಶಿಸದ ಮನೆಯು ನಿವೃತ್ತ ಡ್ಯಾನಿಶ್ ದಂಪತಿಗೆ ಸೇರಿದ್ದು, ಅವರು ಸಾಂಕ್ರಾಮಿಕ ರೋಗವು ಪ್ರಾರಂಭವಾದಾಗಿನಿಂದ ದ್ವೀಪಕ್ಕೆ ಭೇಟಿ ನೀಡಿಲ್ಲ ಎಂದು ಹೇಳಲಾಗಿದೆ. ಆದರೆ, ಜ್ವಾಲಾಮುಖಿಯಿಂದ ತಮ್ಮ ಮನೆ ನಾಶವಾಗದಿರುವುದನ್ನು ಕಂಡು ದಂಪತಿ ತುಂಬಾ ಭಾವುಕರಾಗಿದ್ದಾರಂತೆ.