alex Certify ಜ್ವಾಲಾಮುಖಿ ಎದುರು ಸೆಲ್ಫಿ ಕ್ಲಿಕ್ಕಿಸಿಕೊಂಡ ಭೂಪರು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜ್ವಾಲಾಮುಖಿ ಎದುರು ಸೆಲ್ಫಿ ಕ್ಲಿಕ್ಕಿಸಿಕೊಂಡ ಭೂಪರು…!

ಮೇ 22ರಂದು ಕಾಂಗೋ ಗಣರಾಜ್ಯದ ನೈರಾಗೊಂಗೋ ಪರ್ವತದಲ್ಲಿ ಜ್ವಾಲಾಮುಖಿ ಸಂಭವಿಸಿ 15ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು. ಮಾತ್ರವಲ್ಲದೇ 5000ಕ್ಕೂ ಹೆಚ್ಚು ಮಂದಿಯನ್ನ ಗೋಮಾ ನಗರದಿಂದ ಅನಿವಾರ್ಯವಾಗಿ ಶಿಫ್ಟ್ ಆಗಬೇಕಾಗಿ ಬಂತು.

ಈ ಎಲ್ಲಾ ದುರಂತಗಳದ್ದು ಕತೆ ಒಂದೆಡೆಯಾದ್ರೆ ಕೆಲ ಮಹಾನುಭಾವರು ಜ್ವಾಲಾಮುಖಿಯ ಮುಂದೆ ನಿಂತು ಫೋಟೋಗೆ ಪೋಸ್​ ನೀಡಿದ್ದಾರೆ. ಲಾವಾರಸವು ಸಮೀಪದಲ್ಲಿದ್ದ ಮನೆ ಬೀದಿಗಳನ್ನ ಸುಡುತ್ತಿದ್ದರೂ ಈ ಫೋಟೋ ಪ್ರಿಯರು ಸೆಲ್ಫಿ ಕ್ಲಿಕ್ಕಿಸಿಕೊಳ್ಳೋದ್ರಲ್ಲೇ ಬ್ಯುಸಿಯಾಗಿದ್ದಾರೆ.

ಕಳೆದ 2 ದಶಕಗಳ ಬಳಿಕ ನೈರಾಗಾಂಗೋ ಪರ್ವತದಲ್ಲಿ ಜ್ವಾಲಾಮುಖಿ ಸ್ಫೋಟಿಸಿದೆ. ಈ ಹಿಂದೆ ಸಂಭವಿಸಿದ ಜ್ವಾಲಾಮುಖಿ ಸ್ಫೋಟದಲ್ಲಿ 2002 ಮಂದಿ ಸಾವನ್ನಪ್ಪಿದ್ದರು ಹಾಗೂ 1 ಲಕ್ಷಕ್ಕೂ ಅಧಿಕ ಮಂದಿ ನಿರಾಶ್ರಿತರಾಗಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...