ಕೋವಿಡ್-19 ರೋಗದ ವಿರುದ್ಧ ಪ್ರಪಂಚದ ಅನೇಕ ದೇಶಗಳು ಲಸಿಕೆ ಹಾಕಿಸುತ್ತಿವೆ. ಆರೋಗ್ಯ ಕಾರ್ಯಕರ್ತರು ಕೂಡ ಜನರಿಗೆ ಅರಿವು ಮೂಡಿಸುವ ಸಲ ಲಸಿಕಾ ಅಭಿಯಾನ ನಡೆಸುತ್ತಿದ್ದಾರೆ. ಈ ನಡುವೆ ಬಸ್ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬ ಕೋವಿಡ್ -19 ಲಸಿಕೆ ಕಾರ್ಯಕ್ರಮವನ್ನು ಪ್ರಚಾರ ಮಾಡಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
ಹೌದು, ವ್ಯಕ್ತಿಯೊಬ್ಬ ಬಸ್ ನಿಲ್ದಾಣದ ಬಳಿಯಿದ್ದ ಜನರಿಗೆ ಲಸಿಕೆ ತಿಳುವಳಿಕೆ ಹೇಳಿರುವ ವಿಡಿಯೋ ಭಾರಿ ವೈರಲ್ ಆಗಿದೆ. ಗುಜರಾತ್ ನಲ್ಲಿ ನಡೆದ ಘಟನೆ ಇದು ಎಂದು ಹೇಳಲಾಗಿದೆ. ವಿಡಿಯೋದಲ್ಲಿ, ಲಸಿಕೆ ಹಾಕಿಸುವಂತೆ ಜನರಿಗೆ ಮನವಿ ಮಾಡುತ್ತಿರುವುದನ್ನು ನೋಡಬಹುದು.
“ಹಲೋ ಭಾಯ್ ಲಸಿಕೆ…. ಕೊರೊನಾ ಲಸಿಕೆ ತೆಗೆದುಕೊಳ್ಳಿ….. ಮೊದಲ ಡೋಸ್ ನಂತರ ಎರಡನೇ ಡೋಸ್ ಲಸಿಕೆ ತೆಗೆದುಕೊಳ್ಳಿ. ಎಲ್ಲರೂ ಲಸಿಕೆ ತೆಗೆದುಕೊಂಡಿದ್ದಾರೆ. ಈ ದಾರಿಯಲ್ಲಿ ನಾವು ಹೋಗೋಣ. ಬನ್ನಿ ಅಣ್ಣ…. ಜೀವರಕ್ಷಕ ಲಸಿಕೆ ತೆಗೆದುಕೊಳ್ಳಿ” ಎಂದು ಹೇಳಿದ್ದಾನೆ. ಈತನ ಮನವಿಯು ಅಲ್ಲಿದ್ದ ಜನರಿಗೆ ತರಕಾರಿ ಮಾರಾಟ ಮಾಡುವವನ ಕೂಗಿನಂತೆ ಕೇಳಿದ್ದು, ತಮಾಷೆಯಾಗಿ ನೋಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋವನ್ನು 25,000ಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದು, ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ.
https://www.instagram.com/p/CT_VNrcoyJ8/?utm_source=ig_embed&ig_rid=1b360650-0c3e-4bdd-a8c1-2855fee0258d