ಕೊರೊನಾ ವೈರಸ್ ಸೋಂಕು ಹೆಚ್ಚಿದ್ದ ಸಂದರ್ಭದಲ್ಲಿ ಮಾಸ್ಕ್ ಧರಿಸುವುದು ಸೇರಿದಂತೆ ಇತರೆ ಮುಂಜಾಗ್ರತಾ ಕ್ರಮಗಳನ್ನು ವಿರೋಧಿಸಿದ್ದ ವ್ಯಕ್ತಿ ಕೋವಿಡ್ನಿಂದಲೇ ಸಾವನ್ನಪ್ಪಿದ ಘಟನೆ ಟೆಕ್ಸಾಸ್ನಲ್ಲಿ ನಡೆದಿದೆ.
ಕೊರೊನಾದಿಂದಾಗಿ ಬರೋಬ್ಬರಿ 1 ತಿಂಗಳುಗಳ ಕಾಲ ಐಸಿಯುನಲ್ಲಿ ಸಾವು – ಬದುಕಿನ ನಡುವೆ ಹೋರಾಡಿದ್ದ ಕ್ಯಾಲೆಬ್ ವಾಲೇಸ್ ಶನಿವಾರ ಸಾವನ್ನಪ್ಪಿದ್ದಾರೆ.
ಕ್ಯಾಲೇಬ್ ಪತ್ನಿ ಜೆಸ್ಸಿ ಗೋ ಫಂಡ್ ಮೀ ಪೇಜ್ನಲ್ಲಿ ಕ್ಯಾಲೇಬ್ನ ಆರೋಗ್ಯದ ಬಗ್ಗೆ ಕಾಲ ಕಾಲಕ್ಕೆ ಮಾಹಿತಿ ನೀಡುತ್ತಿದ್ದರು. ಈ ದಂಪತಿ ಈಗಾಗಲೇ ಮೂವರು ಮಕ್ಕಳನ್ನು ಹೊಂದಿದ್ದು ಜೆಸ್ಸಿಕೆ ನಾಲ್ಕನೇ ಮಗುವಿಗೆ ಗರ್ಭ ಧರಿಸಿದ್ದರು.
ಕ್ಯಾಲೆಬ್ ಶಾಂತಿಯಿಂದ ತೆರಳಿದ್ದಾರೆ. ಅವರು ಎಂದಿಗೂ ನಮ್ಮ ಹೃದಯ ಹಾಗೂ ಯೋಚನೆಯಲ್ಲಿ ಇರುತ್ತಾರೆ ಎಂದು ಜೆಸ್ಸಿಕಾ ಬರೆದುಕೊಂಡಿದ್ದಾರೆ.
ಕಳೆದ ವರ್ಷದ ಜುಲೈ 4ರಂದು ಸ್ಯಾನ್ ಎಂಜೇಲೋದಲ್ಲಿ ನಡೆದ ದಿ ಫ್ರೀಡಂ ರ್ಯಾಲಿಗೆ ಕ್ಯಾಲೆಬ್ ಸಹಾಯ ಮಾಡಿದ್ದರು. ಈ ರ್ಯಾಲಿಯಲ್ಲಿ ಮಾಸ್ಕ್ ಧರಿಸುವುದು ಸೇರಿದಂತೆ ವಿವಿಧ ಕೊರೊನಾ ಸಂಬಂಧಿ ಮುಂಜಾಗ್ರತಾ ಕ್ರಮಗಳನ್ನು ಟೀಕಿಸಲಾಗಿತ್ತು.