alex Certify ಮಾಸ್ಕ್ ವಿರೋಧಿ​ ರ್ಯಾಲಿ ಮುನ್ನಡೆಸಿದ್ದ ವ್ಯಕ್ತಿ ಕೋವಿಡ್​ ಗೆ ಬಲಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾಸ್ಕ್ ವಿರೋಧಿ​ ರ್ಯಾಲಿ ಮುನ್ನಡೆಸಿದ್ದ ವ್ಯಕ್ತಿ ಕೋವಿಡ್​ ಗೆ ಬಲಿ

ಕೊರೊನಾ ವೈರಸ್​ ಸೋಂಕು ಹೆಚ್ಚಿದ್ದ ಸಂದರ್ಭದಲ್ಲಿ ಮಾಸ್ಕ್​ ಧರಿಸುವುದು ಸೇರಿದಂತೆ ಇತರೆ ಮುಂಜಾಗ್ರತಾ ಕ್ರಮಗಳನ್ನು ವಿರೋಧಿಸಿದ್ದ ವ್ಯಕ್ತಿ ಕೋವಿಡ್​ನಿಂದಲೇ ಸಾವನ್ನಪ್ಪಿದ ಘಟನೆ ಟೆಕ್ಸಾಸ್​ನಲ್ಲಿ ನಡೆದಿದೆ.

ಕೊರೊನಾದಿಂದಾಗಿ ಬರೋಬ್ಬರಿ 1 ತಿಂಗಳುಗಳ ಕಾಲ ಐಸಿಯುನಲ್ಲಿ ಸಾವು – ಬದುಕಿನ ನಡುವೆ ಹೋರಾಡಿದ್ದ ಕ್ಯಾಲೆಬ್​​ ವಾಲೇಸ್​ ಶನಿವಾರ ಸಾವನ್ನಪ್ಪಿದ್ದಾರೆ.

ಕ್ಯಾಲೇಬ್​​ ಪತ್ನಿ ಜೆಸ್ಸಿ ಗೋ ಫಂಡ್​ ಮೀ ಪೇಜ್​ನಲ್ಲಿ ಕ್ಯಾಲೇಬ್​ನ ಆರೋಗ್ಯದ ಬಗ್ಗೆ ಕಾಲ ಕಾಲಕ್ಕೆ ಮಾಹಿತಿ ನೀಡುತ್ತಿದ್ದರು. ಈ ದಂಪತಿ​ ಈಗಾಗಲೇ ಮೂವರು ಮಕ್ಕಳನ್ನು ಹೊಂದಿದ್ದು ಜೆಸ್ಸಿಕೆ ನಾಲ್ಕನೇ ಮಗುವಿಗೆ ಗರ್ಭ ಧರಿಸಿದ್ದರು.

ಕ್ಯಾಲೆಬ್​ ಶಾಂತಿಯಿಂದ ತೆರಳಿದ್ದಾರೆ. ಅವರು ಎಂದಿಗೂ ನಮ್ಮ ಹೃದಯ ಹಾಗೂ ಯೋಚನೆಯಲ್ಲಿ ಇರುತ್ತಾರೆ ಎಂದು ಜೆಸ್ಸಿಕಾ ಬರೆದುಕೊಂಡಿದ್ದಾರೆ.

ಕಳೆದ ವರ್ಷದ ಜುಲೈ 4ರಂದು ಸ್ಯಾನ್​ ಎಂಜೇಲೋದಲ್ಲಿ ನಡೆದ ದಿ ಫ್ರೀಡಂ ರ್ಯಾಲಿಗೆ ಕ್ಯಾಲೆಬ್​ ಸಹಾಯ ಮಾಡಿದ್ದರು. ಈ ರ್ಯಾಲಿಯಲ್ಲಿ ಮಾಸ್ಕ್​ ಧರಿಸುವುದು ಸೇರಿದಂತೆ ವಿವಿಧ ಕೊರೊನಾ ಸಂಬಂಧಿ ಮುಂಜಾಗ್ರತಾ ಕ್ರಮಗಳನ್ನು ಟೀಕಿಸಲಾಗಿತ್ತು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...