ವೇತನ/ಪಿಂಚಣಿ, ಇಎಂಐ ಪಾವತಿ ಸೇರಿದಂತೆ ಅನೇಕ ಮಹತ್ವದ ಸೇವೆಗಳನ್ನು ಇನ್ನಷ್ಟು ಗ್ರಾಹಕ ಸ್ನೇಹಿಗೊಳಿಸಲು ರಿಸರ್ವ್ ಬ್ಯಾಂಕ್ ಹೊರಡಿಸಿರುವ ನೂತನ ಆದೇಶವೊಂದು ಆಗಸ್ಟ್ 1ರಿಂದ ಜಾರಿಗೆ ಬರಲಿದೆ.
ರಾಷ್ಟ್ರೀಯ ಸ್ವಯಂಚಾಲಿತ ಕ್ಲಿಯರಿಂಗ್ ಗೃಹದ (ನಾಚ್) ನಿಯಮಾವಳಿಗಳಲ್ಲಿ ಬದಲಾವಣೆ ತಂದಿರುವ ಆರ್ಬಿಐ, ಈ ಸಂಬಂಧ ಹೊಸ ಮಾರ್ಗಸೂಚಿ ಹೊರಡಿಸಿದೆ.
ಮುಂದಿನ ತಿಂಗಳಿನಿಂದ ನಿಮ್ಮ ವೇತನ ಪಡೆಯಲು ತಿಂಗಳ ಕೊನೆಯಲ್ಲಿ ವಾರದ ದಿನಕ್ಕೆಂದು ಕಾಯಬೇಕಾದ ಅಗತ್ಯವಿಲ್ಲ. ನಾಚ್ ಸೇವೆಗಳು ವಾರದುದ್ದಕ್ಕೂ ಲಭ್ಯವಿರುವ ಕಾರಣ ಇದೀಗ ವೇತನ, ಪಿಂಚಣಿ ಪಡೆಯುವುದು ಮತ್ತು ಇಎಂಐ ಹಣ ಪಾವತಿ ಮಾಡುವಂಥ ಸೇವೆಗಳನ್ನು ವಾರಾಂತ್ಯದಲ್ಲೂ ಮಾಡಬಹುದಾಗಿದೆ.
ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್: ಅಂಚೆ ಇಲಾಖೆಯಲ್ಲಿ 2357 ಹುದ್ದೆಗಳಿಗೆ ಅರ್ಜಿ ಆಹ್ವಾನ
ಬಡ್ಡಿ ದರದ ಪಾವತಿ, ಡಿವಿಡೆಂಡ್ ಪಾವತಿ, ನೀರು, ಗ್ಯಾಸ್, ವಿದ್ಯುತ್ ಬಿಲ್, ಸಾಲದ ಕಂತು ಪಾವತಿ, ಮ್ಯೂಚುವಲ್ ಫಂಡ್ ಮೇಲೆ ಹೂಡಿಕೆಯ ಕಂತುಗಳು, ವಿಮೆಯ ಪ್ರೀಮಿಯಂ ಪಾವತಿಗಳು ಸೇರಿದಂತೆ ಅನೇಕ ಸೇವೆಗಳು ಇದರಿಂದಾಗಿ 24×7 ಲಭ್ಯವಿರಲಿವೆ.
ಅನೇಕ ಬಾರಿ ತಿಂಗಳ ಮೊದಲ ದಿನ ವಾರಾಂತ್ಯವೇ ಬರುವ ಕಾರಣದಿಂದ ಸಂಬಳದ ಮೊತ್ತ ಖಾತೆಗೆ ಬರುವುದಕ್ಕೆ 1-2 ದಿನ ಕಾಯಬೇಕಾಗಿತ್ತು. ಆಗಸ್ಟ್ 1ರಿಂದ ಆರ್ಟಿಜಿಎಸ್ ಹಾಗೂ ನಾಚ್ ಸೇವೆಗಳು 24×7 ಲಭ್ಯವಿರಲಿವೆ.