ಕೋವಿಡ್ ಕಡಿಮೆಯಾಗುತ್ತಿದೆ, ಜನ ಜೀವನ ಸಹಜ ಸ್ಥಿತಿಗೆ ಬರುತ್ತಿದೆ. ಜನತೆ ಮತ್ತೆ ತಮ್ಮ ಅಗತ್ಯತೆಗಳ ಬಗ್ಗೆ ಗಮನ ಕೊಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಮಾರುತಿ ಸುಜುಕಿ ಕಾರು ಖರೀದಿ ಮಾಡಲು ಆಸಕ್ತರಾದವರಿಗೆ ಇಲ್ಲೊಂದು ಗುಡ್ ನ್ಯೂಸ್ ಇದೆ.
ಮಾರುತಿ ಸುಜುಕಿಯವರು ಸ್ಮಾರ್ಟ್ ಫೈನಾನ್ಸ್ ಆರಂಭಿಸಿದ್ದು, ಕೆಲವೇ ಕ್ಲಿಕ್‌ಗಳ ಮೂಲಕ ಕಾರಿಗೆ ಹಣಕಾಸು ಸೌಲಭ್ಯ ಕಲ್ಪಿಸುವ ಮಾರ್ಗವೆಂದು ಕಂಪನಿ ಹೇಳಿಕೊಂಡಿದೆ.
ಉದ್ಯೋಗದ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್: BSF ಗ್ರೂಪ್ ಬಿ, ಸಿ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ
ಮಾರುತಿ ಸುಜುಕಿಯು ತನ್ನ ವೆಬ್ ಸೈಟ್‌ನಲ್ಲಿ ಈ ವಿವರ ಪ್ರಕಟಿಸಿದೆ. ವೈಯಕ್ತಿಕ ಮಾಹಿತಿ ಪರಿಶೀಲನೆ, ಲೋನ್ ಆಫರ್ ಆಯ್ಕೆ, ದಾಖಲೆಗಳ ಅಪ್ ಲೋಡ್, ವೆರಿಫಿಕೇಶನ್ ಎಂಬ ನಾಲ್ಕು ಘಟ್ಟಗಳನ್ನು ಸರಳೀಕರಿಸಿದೆ. ಜತೆಗೆ ಅಲ್ಲೇ ಕೆಳಭಾಗದಲ್ಲಿ ಸಾಲದ ಮೊತ್ತ, ಸಾಲದ ಅವಧಿ, ಬಡ್ಡಿದರ, ಇಎಂಐ ಎಸ್ಟಿಮೇಟ್ ಸಹ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಮನೆಯಲ್ಲಿ ಕುಳಿತೇ ಈ ಪ್ರಕ್ರಿಯೆ ಮುಗಿಸಬಹುದಾಗಿದೆ.
ಮಾರುತಿ ಸುಜುಕಿ ಇಂಡಿಯಾದ ಹಿರಿಯ ಕಾರ್ಯನಿರ್ವಾಹಕ ನಿರ್ದೇಶಕ (ಮಾರ್ಕೆಟಿಂಗ್ ಮತ್ತು ಸೇಲ್ಸ್) ಶಶಾಂಕ್ ಶ್ರೀವಾಸ್ತವ ಈ ಕುರಿತು ವಿವರಣೆ ನೀಡಿದ್ದು, ಬದಲಾಗುತ್ತಿರುವ ಗ್ರಾಹಕರ ನಡವಳಿಕೆ ಗಮನದಲ್ಲಿಟ್ಟುಕೊಂಡು, ದೇಶದಲ್ಲೇ ಮೊದಲ ಪ್ರಯತ್ನ ಮಾಡಿ ಮಾರುತಿ ಸುಜುಕಿ ಸ್ಮಾರ್ಟ್ ಫೈನಾನ್ಸ್ ಪ್ರಾರಂಭಿಸಿದ್ದೇವೆ. ಈ ಡಿಜಿಟಲ್ ಪ್ಲಾಟ್‌ಫಾರ್ಮ್ ಗ್ರಾಹಕರಿಗೆ ಎಂಡ್ ಟು ಎಂಡ್ ಹಣಕಾಸು ಕುರಿತ ನೆರವು ಒದಗಿಸುತ್ತದೆ ಎಂದಿದ್ದಾರೆ.