ಸ್ಯಾಂಡಲ್ವುಡ್ ನಟ ದಿಗಂತ್ರ ಬಹು ನಿರೀಕ್ಷಿತ ಸಿನಿಮಾ ʼಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲʼ ಚಿತ್ರದ ಮೊದಲ ಲಿರಿಕಲ್ ಗೀತೆ ಇದೇ ವಾರ ರಿಲೀಸ್ ಆಗಲಿದೆ.
ಈ ಬಗ್ಗೆ ಚಿತ್ರತಂಡ ಸೋಶಿಯಲ್ ಮೀಡಿಯಾದಲ್ಲಿ ಅಧಿಕೃತ ಘೋಷಣೆ ಮಾಡಿದೆ. ಸಿನಿಮಾದ ಮೊದಲ ಲಿರಿಕಲ್ ಗೀತೆ ಜುಲೈ 8ರಂದು ಮಧ್ಯಾಹ್ನ 1 ಗಂಟೆಗೆ ಬಿಡುಗಡೆಯಾಗಲಿದೆ.
ವಿನಾಯಕ ಕೋಡ್ಸರ ನಿರ್ದೇಶನದ ಈ ಸಿನಿಮಾದಲ್ಲಿ ನಟ ದಿಗಂತ್ ಮಂಚಾಲೆ, ಐಂದ್ರಿತಾ ರೈ ಹಾಗೂ ರಂಜನಿ ರಾಘವನ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಸಂಪೂರ್ಣ ಮಲೆನಾಡಿನ ಕತೆ ಇದಾಗಿದ್ದು, ಈ ಸಿನಿಮಾದಲ್ಲಿ ನಟ ದಿಗಂತ್ ಗೊಬ್ಬರದ ಅಂಗಡಿ ಮಾಲೀಕರಾಗಿ ಕಾಣಿಸಿಕೊಳ್ಳಲಿದ್ದಾರೆ.
ʼಫೇಸ್ ಬುಕ್ʼ ಸಂಸ್ಥಾಪಕನ ಈ ವಿಡಿಯೋ ವೈರಲ್
ಸಂಪೂರ್ಣ ಕಾಮಿಡಿ ಜೋನರ್ ಸಿನಿಮಾ ಇದಾಗಿದೆ. ಇನ್ನೊಂದು ವಿಶೇಷ ಅಂದರೆ ದಿಗಂತ್ ಹಾಗೂ ಐಂದ್ರಿತಾ ದಂಪತಿ ಬರೋಬ್ಬರಿ 7 ವರ್ಷಗಳ ಬಳಿಕ ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ತಿದ್ದಾರೆ. ಉಪ್ಪಿ ಎಂಟರ್ಟೈನರ್ ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ಮೂಡಿಬಂದಿದ್ದು ಸಿಲ್ಕ್ ಮಂಜು ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.