ಕೋವಿಡ್ ಮಾರ್ಗ ಸೂಚಿಗಳನ್ನ ಉಲ್ಲಂಘಿಸಿದ ಕಾರಣಕ್ಕಾಗಿ ದೆಹಲಿಯ ಲಜಪತ್ ನಗರದ ಪ್ರಸಿದ್ಧ ಸೆಂಟ್ರಲ್ ಮಾರ್ಕೆಟ್ ಸೇರಿದಂತೆ ಎರಡು ದೊಡ್ಡ ಮಾರ್ಕೆಟ್ಗಳನ್ನ ಬಂದ್ ಮಾಡಿಸಲಾಗಿದೆ. ಕಳೆದ ಎರಡು ದಿನಗಳ ಹಿಂದೆಯಷ್ಟೇ ಕೊರೊನಾ ಮಾರ್ಗಸೂಚಿಗಳನ್ನ ಉಲ್ಲಂಘಿಸಿದ್ದಕ್ಕಾಗಿ ಎರಡು ಮಾರ್ಕೆಟ್ಗಳನ್ನ ಜುಲೈ 6ರವರೆಗೆ ಬಂದ್ ಮಾಡಿಸಲಾಗಿತ್ತು. ಇದೀಗ ಇದೇ ಸಾಲಿಗೆ ಸೆಂಟ್ರಲ್ ಮಾರ್ಕೆಟ್ ಕೂಡ ಸೇರಿದೆ.
ಸಾಮಾಜಿಕ ಅಂತರ ಸೇರಿದಂತೆ ವಿವಿಧ ಕೊರೊನಾ ಮಾರ್ಗಸೂಚಿಗಳನ್ನ ಉಲ್ಲಂಘಿಸಿದ ಹಿನ್ನೆಲೆ ಮುಂದಿನ ಆದೇಶ ಬರುವವರೆಗೂ ಸೆಂಟ್ರಲ್ ಮಾರ್ಕೆಟ್ ಬಂದ್ ಇರಲಿದೆ. ಈ ಮಾರ್ಕೆಟ್ನಲ್ಲಿ 2 ಸಾವಿರಕ್ಕೂ ಅಧಿಕ ಅಂಗಡಿಗಳಿವೆ.
ಸದರ್ ಬಜಾರ್ನ ರೂಯಿ ಮಾರ್ಕೆಟ್ ಕೂಡ ನಾಳೆವರೆಗೆ ಬಂದ್ ಇರಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಕೋವಿಡ್ ಮಾರ್ಗಸೂಚಿಗಳನ್ನ ಉಲ್ಲಂಘಿಸಿ ಜನಜಾತ್ರೆ ಸೇರಿದ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ.
ನಾವು ಗ್ರಾಹಕರ ಬಳಿ ಸಾಮಾಜಿಕ ಅಂತರ ಕಾಪಾಡುವಂತೆ ಮನವಿ ಮಾಡಿದ್ದೆವು. ಕೊರೊನಾ ಮಾರ್ಗಸೂಚಿಗಳ ಪಾಲನೆಗೆ ನಮ್ಮ ಕೈ ಮೀರಿ ಪ್ರಯತ್ನ ಮಾಡುತ್ತಿದ್ದೇವೆ. ಹೆಚ್ಚಿನ ಜನರು ಮಾಸ್ಕ್ ಧರಿಸಿಯೇ ಮಾರ್ಕೆಟ್ಗೆ ಬರುತ್ತಾರೆ. ಹಾಗಂತ 100 ಪ್ರತಿಶತ ಕೊರೊನಾ ಮಾರ್ಗಸೂಚಿ ಪಾಲನೆಯಾಗಿದೆ ಎಂತಲೂ ನಾನು ಹೇಳಲಾರೆ ಎಂದು ಸೆಂಟ್ರಲ್ ಮಾರ್ಕೆಟ್ನ ವ್ಯಾಪಾರಿಯೊಬ್ಬರು ಹೇಳಿದ್ರು.