ಕೋವಿಡ್-19 ಸಾಂಕ್ರಮಿಕದಿಂದಾಗಿ ಜಗತ್ತಿನಾದ್ಯಂತ ಜನರ ದಿನನಿತ್ಯದ ಜೀವನಗಳೇ ಬದಲಾಗಿದ್ದು, ಎಲ್ಲೆಲ್ಲೂ ಸಾಮಾಜಿಕ ಅಂತರದ್ದೇ ಮಾತಾಗಿಬಿಟ್ಟಿದೆ. ಬಹಳಷ್ಟು ಮಂದಿಗೆ ತಮ್ಮ ಪ್ರೀತಿಪಾತ್ರರಿಂದ ದೂರ ಉಳಿಯಬೇಕಾದ ಈ ಪರಿಸ್ಥಿತಿ ಭಾರೀ ಅಸಹನೀಯವೆನಿಸಿಬಿಟ್ಟಿದೆ.
ಆದರೆ ಜಪಾನಿನ ನಿಟೋ ಸೌಜಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಕ್ರಿಯೆಗೆ ಕಳೆದೊಂದು ದಶಕದಿಂದ ಒಗ್ಗಿ ಹೋಗಿದ್ದಾರೆ. ವೃತ್ತಿಪರ ಗೇಮ್ ಡೆವಲಪರ್ ಆದ ಸೌಜಿ 10 ವರ್ಷಗಳ ಹಿಂದೆ ತಮ್ಮ ಊರಿಗೆ ಬಂದು ಸೇರಿದ ಬಳಿಕ ತಮ್ಮ ಮನೆಯಿಂದ ಹೊರಗೆ ಕಾಲಿಡುತ್ತಿಲ್ಲ.
12 ವರ್ಷ ಮೇಲ್ಪಟ್ಟವರಿಗೆ ʼಕೊರೊನಾʼ ಲಸಿಕೆ ಕುರಿತಂತೆ ಕೇಂದ್ರದಿಂದ ಮಹತ್ವದ ಮಾಹಿತಿ
ಎರಡು ತಿಂಗಳಿಗೊಮ್ಮೆ ಹೇರ್‌ಕಟ್‌ಗಾಗಿ ಮಾತ್ರವೇ ತಮ್ಮ ಅಪಾರ್ಟ್‌ಮೆಂಟ್‌ನಿಂದ ಹೊರಗೆ ಬರುವ ಸೌಜಿ, ತಮ್ಮನ್ನು ತಾವು ’ಹಿಕಿಕೋಮೋರಿ’ ಎಂದು ಕರೆದುಕೊಳ್ಳುತ್ತಾರೆ. ಜಪಾನೀ ಭಾಷೆಯಲ್ಲಿ ’ಹಿಕಿಕೋಮೋರಿ’ ಎಂದರೆ ಸಮಾಜದಿಂದ ಏಕಾಂತ ಬಯಸಿ ಒಬ್ಬರೇ ಇರುವುದು ಎಂದರ್ಥ. ಈ ಹಿಕಿಕೋಮೋರಿ ಬಗ್ಗೆ ಯೂಟ್ಯೂಬ್‌ನಲ್ಲಿರುವ ತಮ್ಮ ಚಾನೆಲ್‌ನಲ್ಲಿ ಮಾತನಾಡುವ ಸೌಜಿ, ಈ ಕುರಿತಂತೆ ಇರುವ ಸವಾಲುಗಳ ಬಗ್ಗೆ ವಿಶ್ಲೇಷಿಸಿದ್ದಾರೆ.
BIG NEWS: ಚಿನ್ನದ ಹುಡುಗಿ ದೀಪಿಕಾ ಕುಮಾರಿಗೆ ಆರ್ಚರಿ ವಿಶ್ವ ರ್ಯಾಂಕಿಂಗ್ನಲ್ಲಿ ಮೊದಲ ಸ್ಥಾನ..!
ಜಪಾನಿನಲ್ಲಿ ಐದು ಲಕ್ಷದಷ್ಟು ಯುವಕರು ಹಾಗೂ ಅಷ್ಟೇ ಅಂದಾಜಿನ ಮಧ್ಯ ವಯಸ್ಕರು ಸೌಜಿರಂತೆ ಏಕಾಂತ ಬಯಸಿ ’ಹಿಕಿಕೋಮೋರಿ’ ಆಗುತ್ತಿದ್ದಾರೆ ಎನ್ನಲಾಗಿದೆ.