alex Certify BIG NEWS: ಚಿನ್ನದ ಹುಡುಗಿ ದೀಪಿಕಾ ಕುಮಾರಿಗೆ ಆರ್ಚರಿ ವಿಶ್ವ​ ರ್ಯಾಂಕಿಂಗ್​ನಲ್ಲಿ ಮೊದಲ ಸ್ಥಾನ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಚಿನ್ನದ ಹುಡುಗಿ ದೀಪಿಕಾ ಕುಮಾರಿಗೆ ಆರ್ಚರಿ ವಿಶ್ವ​ ರ್ಯಾಂಕಿಂಗ್​ನಲ್ಲಿ ಮೊದಲ ಸ್ಥಾನ..!

ಭಾರತದ ಸ್ಟಾರ್​ ಆರ್ಚರಿ ​ ಆಟಗಾರ್ತಿ ದೀಪಿಕಾ ಕುಮಾರಿ ಒಂದೇ ದಿನ ಮೂರು ಚಿನ್ನದ ಪದಕಗಳನ್ನ ಗಳಿಸುವ ಮೂಲಕ ಗ್ಲೋಬಲ್​ ರ್ಯಾಂಕಿಂಗ್​ನಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ.

ರಾಂಚಿಯ 27 ವರ್ಷದ ಈ ಆಟಗಾರ್ತಿ 2012ರಿಂದ ಇದೇ ಮೊದಲ ಬಾರಿ ಗ್ಲೋಬಲ್​ ರ್ಯಾಂಕಿಂಗ್​ ಮೊದಲ ಸ್ಥಾನ ಪಡೆದಿದ್ದಾರೆ. ಮಹಿಳೆಯರ ವೈಯಕ್ತಿಕ ಸ್ಪರ್ಧೆ, ಮಹಿಳಾ ತಂಡ ಹಾಗೂ ಮಿಶ್ರ ಫೈನಲ್​ಗಳಲ್ಲಿ ಗೆದ್ದು ಬೀಗಿದ ದೀಪಿಕಾ ಮೂರು ಚಿನ್ನದ ಪದಕಗಳನ್ನ ತಮ್ಮದಾಗಿಸಿಕೊಂಡಿದ್ದಾರೆ.

ದೀಪಿಕಾರ ಈ ಸಾಧನೆಯಿಂದಾಗಿಯೇ ಅವರು ಸೋಮವಾರ ಗ್ಲೋಬಲ್​ ರ್ಯಾಂಕಿಂಗ್​ನಲ್ಲಿ ಮೊದಲ ಸ್ಥಾನ ಪಡೆಯುವಂತಾಗಿದೆ ಎಂದು ವಿಶ್ವ ಅರ್ಚರಿ ಅಧಿಕೃತ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದೆ.

ಮಹಿಳೆಯ ವೈಯಕ್ತಿಕ ಸ್ಪರ್ಧೆಯಲ್ಲಿ ರಷ್ಯಾದ ಎಲೆನಾ ಒಸಿಪೋವಾ ವಿರುದ್ಧ 6-0 ಅಂತರದಲ್ಲಿ ಜಯ ಸಾಧಿಸಿದ್ದರು. ಅಲ್ಲದೇ ಮಿಶ್ರ ಫೈನಲ್​ನಲ್ಲಿ ಪತಿ ಅಟಾನು ದಾಸ್​ ಜೊತೆ ಸೇರಿ ನೆದರ್​​ಲೆಂಡ್​ ತಂಡವನ್ನ 5-3 ಅಂತರದಲ್ಲಿ ಮಣಿಸಿತ್ತು. ಇನ್ನು ಮಹಿಳಾ ಗುಂಪು ಸ್ಪರ್ಧೆಯಲ್ಲಿ ಕೋಮಲಿಕಾ ಬ್ಯಾರಿ ಜೊತೆ ಸೇರಿ ಮೆಕ್ಸಿಕೋ ವಿರುದ್ಧ ಗೆಲುವಿನ ನಗೆ ಬೀರಿದ್ದರು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...