ಶುಕ್ರವಾರ ಸುರಿದ ಭಾರೀ ಮಳೆಯಿಂದಾಗಿ ಬಿಹಾರ ವಿಧಾನಸಭಾ ಕಟ್ಟಡದ ಆವರಣ, ಉಪ ಮುಖ್ಯಮಂತ್ರಿ ರೇಣು ದೇವಿ ನಿವಾಸ ಸೇರಿದಂತೆ ಪಾಟ್ನಾದ ವಿವಿಧ ಭಾಗಗಳು ಸಂಪೂರ್ಣ ಜಲಾವೃತವಾದ ದೃಶ್ಯ ಇಂದು ಕಂಡುಬಂದಿದೆ.
ಶುಕ್ರವಾರದಿಂದ ಪಾಟ್ನಾದಲ್ಲಿ 145 ಮಿಲಿಮೀಟರ್ ಮಳೆ ವರದಿಯಾಗಿದೆ. ಈ ದಶಕದಲ್ಲೇ ಈ ದಿನಾಂಕದಂದು ದಾಖಲಾದ ಅತೀ ಹೆಚ್ಚಿನ ಪ್ರಮಾಣದ ಮಳೆ ಇದಾಗಿದೆ.
3 ವರ್ಷ ವಯಸ್ಸಿನಲ್ಲೇ 50ಕ್ಕೂ ಹೆಚ್ಚು ಹಾಡನ್ನ ಹೇಳ್ತಾಳೆ ಈ ಪೋರಿ..!
ಮುಂಜಾನೆ ಸಂಭವಿಸಿದ ಭಾರೀ ಸಿಡಿಲು ನಗರ ನಿವಾಸಿಗಳ ನಿದ್ದೆಗೆಡಿಸಿದೆ. ಆದರೆ ಮಳೆಗೆ ಯಾವುದೇ ಸಾವು ನೋವು ಸಂಭವಿಸಿದ ಬಗ್ಗೆ ವರದಿಯಾಗಿಲ್ಲ. ರಸ್ತೆ ತುಂಬೆಲ್ಲ ನೀರು ಹರಿದಾಡಿದ್ದರಿಂದ ಜನ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿತ್ತು.
ಮನ ಮುದಗೊಳಿಸುತ್ತೆ ಮರಿಯಾನೆ ಚಿನ್ನಾಟದ ವಿಡಿಯೋ
ಬಿಹಾರ ವಿಧಾನಸಭೆ ಕಟ್ಟಡದ ಆವರಣ ಜಲಾವೃತವಾಗಿರುವ ಬಗ್ಗೆ ಸಾಕಷ್ಟು ವಿಡಿಯೋ ಹಾಗೂ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಇಲ್ಲಿಂದ ಅನತಿ ದೂರದಲ್ಲಿರುವ ರೇಣು ದೇವಿ ನಿವಾಸದ ಸ್ಥಿತಿ ಕೂಡ ಇದೇ ರೀತಿಯಾಗಿತ್ತು.