ದೇಶದ ದೊಡ್ಡ ನಗರಗಳಲ್ಲಿ ಮಾಲಿನ್ಯದ ಪ್ರಮಾಣ ಮಿತಿ ಮೀರಿರುವುದು ಕೋವಿಡ್ ಇನ್ನಷ್ಟು ವ್ಯಾಪಕವಾಗಿ ಹರಡಲು ಕಾರಣವಾಗಿದೆ ಎಂದು ಆರು ವಿಜ್ಞಾನಿಗಳ ತಂಡವೊಂದು ನಡೆಸಿದ ಅಧ್ಯಯನದ ವರದಿಯಲ್ಲಿ ತಿಳಿದುಬಂದಿದೆ.
ಭುವನೇಶ್ವರದ ಉತ್ಕಲ ವಿವಿ, ಐಐಟಿ-ಪುಣೆ, ರೂರ್ಕೆಲಾದ ಎನ್‌ಐಟಿ ಹಾಗೂ ಐಐಟಿ-ಭುವನೇಶ್ವರದಿಂದ ಒಟ್ಟಾರೆ ಆರು ಮಂದಿ ಸಂಶೋಧಕರು ಈ ಅಧ್ಯಯನ ನಡೆಸಿದ್ದಾರೆ.
ತಲೆ ತಿರುಗಿಸುವಂತಿದೆ ಕೇಶ ವಿನ್ಯಾಸಕಿಯ ಬಿಲ್….!
ಧೂಳು, ಪಾಲೆನ್, ಸೂಟ್ ಹಾಗೂ ಧೂಮಗಳೆಲ್ಲಾ ಸೇರಿರುವ ಪಿಎಂ 2.5 ಗಾತ್ರದ ಮಾಲಿನ್ಯಕಾರಕಗಳ ಕಾರಣದಿಂದ ಮುಂಬೈ, ಪುಣೆ, ದೆಹಲಿ ಹಾಗೂ ಅಹಮದಾಬಾದ್‌ಗಳಲ್ಲಿ 2020ರ ಮಾರ್ಚ್ – ನವೆಂಬರ್ ಅವಧಿಯಲ್ಲಿ ಅತ್ಯಂತ ಹೆಚ್ಚಿನ ಕೋವಿಡ್-19 ಪ್ರಕರಣಗಳು ದಾಖಲಾಗಿವೆ ಎಂದು ’ಎಲ್ಸೆವಿ ಜರ್ನಲ್’ ಎಂಬ ನಿಯತಕಾಲಿಕೆಯಲ್ಲಿ ಪ್ರಕಟಗೊಂಡ ಅಧ್ಯಯನ ವರದಿ ತಿಳಿಸುತ್ತಿದೆ.
ಈ ಬಣ್ಣದ ಹಾವನ್ನ ಹಿಂದೆಂದೂ ನೀವು ನೋಡಿರೋಕೆ ಸಾಧ್ಯವೇ ಇಲ್ಲ..!
“ಪಿಎಂ 2.5ನಂಥ ಮಾಲಿನ್ಯಕಾರಕಗಳೊಂದಿಗೆ ಕೊರೋನಾ ವೈರಸ್ ಅಂಟಿಕೊಳ್ಳಲಿದ್ದು, ವಾಯುವಿನ ಮೂಲಕ ಹಬ್ಬುವ ಸಾಧ್ಯತೆ ಪಡೆದುಕೊಂಡು ಇನ್ನಷ್ಟು ಪ್ರಭಾವಿಯಾಗಲಿವೆ. ಮಾಲಿನ್ಯ ಹೆಚ್ಚುತ್ತಿರುವ ಕಾರಣ ಕೋವಿಡ್-19 ಇನ್ನಷ್ಟು ವ್ಯಾಪಕವಾಗಿ ಹಬ್ಬಲು ಸಾಧ್ಯವಾಗಿದೆ” ಎಂದು ಅಧ್ಯಯನ ಮುಂದಾಳತ್ವ ವಹಿಸಿದ್ದ ಡಾ. ಸರೋಜ್ ಕುಮಾರ್ ಸಾಹು ತಿಳಿಸಿದ್ದಾರೆ.
ಈ ಅವಧಿಯಲ್ಲಿ ಮುಂಬೈಯಲ್ಲಿ 2.64 ಲಕ್ಷ ಕೋವಿಡ್ ಪ್ರಕರಣಗಳು ಕಂಡುಬಂದರೆ, ಪುಣೆಯಲ್ಲಿ 3.38 ಲಕ್ಷ ಕೋವಿಡ್ ಕೇಸ್‌ಗಳು ದಾಖಲಾಗಿದ್ದವು.