
ಅಮೆರಿಕದ ನ್ಯೂ ಹ್ಯಾಂಪ್ಶೈರ್ನ ಥಾರ್ನ್ಟನ್ನ ಪೊಲೀಸರಿಗೆ, ಕಾರುಗಳ ಒಳಗಿದ್ದ ತಿಂಡಿ ಕಳುವಾಗುತ್ತಿದ್ದ ಪ್ರಕರಣವೊಂದು ಭಾರೀ ತಲೆ ತಿನ್ನುತ್ತಿತ್ತು.
ಆದರೆ ಇತರೆ ಪ್ರಕರಣಗಳಂತೆ ಇಲ್ಲಾವ ಕಳ್ಳನೂ ಸಿಕ್ಕಿಬಿದ್ದಿಲ್ಲ. ಕಾರಿನೊಳಗಿದ್ದ ತಿಂಡಿ ಆಸೆಗೆ ಕಾರಿನ ಬಾಗಿಲನ್ನು ಒಡೆಯುತ್ತಿದ್ದ ಕರಡಿಯೊಂದು ಇದಕ್ಕೆಲ್ಲಾ ಕಾರಣ ಎಂದು ಸ್ಥಳದಲ್ಲಿದ್ದ ಸಿಸಿಟಿವಿ ಫುಟೇಜ್ಗಳನ್ನು ಪರಿಶೀಲಿಸಿದ ಪೊಲೀಸರು ತಿಳಿಸಿದ್ದಾರೆ.
ದಿವಾಳಿಯಾಗಿ ಮನೆ ಮಾರಿದ್ದ ಖ್ಯಾತ ನಟನಿಗೆ ನೆರವಾಗಿದ್ದ ಮಗ…!
ಈ ಸಂಬಂಧ ಪ್ರಕಟಣೆಯೊಂದನ್ನು ಹೊರಡಿಸಿರುವ ಪೊಲೀಸರು, ಕರಡಿಯು ತಮ್ಮ ಕಾರಿನತ್ತ ಆಕರ್ಷಿತನಾಗದೇ ಇರುವಂತೆ ಮಾಡಲು ತಿಂಡಿತೀರ್ಥಗಳನ್ನು ಕಾರುಗಳ ಒಳಗೆ ಇಡದಿರಲು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಮೆಟ್ರೋ ನಿಲ್ದಾಣದಿಂದ ಪ್ರಯಾಣ ಮಾಡಿದ ವಿಶೇಷ ಅತಿಥಿ ಕಂಡು ಪ್ರಯಾಣಿಕರು ಶಾಕ್…..!
ಕಂದು ಬಣ್ಣದ ಈ ಕರಡಿಯು ಬಲು ಜಾಣನಾಗಿದ್ದು, ಆಹಾರ ಶೋಧಿಸುತ್ತಾ ಕಾರುಗಳ ಬಾಗಿಲುಗಳನ್ನು ತೆರೆಯುವುದು ಹೇಗೆಂದು ಅರಿತುಕೊಂಡಿದೆ. ಈ ಯಾವುದೇ ಘಟನೆಯಲ್ಲಿ ಕರಡಿಗೆ ಗಾಯವಾಗಿಲ್ಲ.