ಬೆಂಗಳೂರು: ಕೊರೊನಾ ಸೋಂಕು ನಿಯಂತ್ರಣಕ್ಕೆ ಬರುತ್ತಿರುವ ಬೆನ್ನಲ್ಲೇ ರಾಜ್ಯದ 19 ಜಿಲ್ಲೆಗಳಲ್ಲಿ ಈಗಾಗಲೇ ರಾಜ್ಯ ಸರ್ಕಾರ ಅನ್ ಲಾಕ್ 1.0 ಪ್ರಕ್ರಿಯೆ ಆರಂಭಿಸಿದ್ದು, ಅನ್ ಲಾಕ್ 2.0 ಗೂ ಮುಹೂರ್ತ ನಿಗದಿ ಮಾಡಿದೆ.
ಕೊರೊನಾಘಾತದಿಂದಾಗಿ ಆರ್ಥಿಕತೆ ಸಂಪೂರ್ಣ ನೆಲಕಚ್ಚಿದ್ದು, ಮತ್ತೆ ಚೇತರಿಕೆ ನೀಡುವ ನಿಟ್ಟಿನಲ್ಲಿ ಜೂನ್ 21ರಿಂದ ರಾಜ್ಯಾದ್ಯಂತ ಅನ್ ಲಾಕ್ 2.0 ಆರಂಭವಾಗಲಿದ್ದು, ಸಾರಿಗೆ ಸಂಚಾರ, ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶ ನೀಡಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ ಎಂದು ತಿಳಿದುಬಂದಿದೆ.
ಕೋವಿಡ್ ಜಾಗೃತಿ ಮೂಡಿಸುವ ಸಂದೇಶ ಮಂಚದ ಮೇಲೆ ಬರೆದ ಕಲಾವಿದ
ಈ ನಿಟ್ಟಿನಲ್ಲಿ ಜೂನ್ 21ರಿಂದ ಸರ್ಕಾರಿ ಹಾಗೂ ಖಾಸಗಿ ಬಸ್ ಸಂಚಾರಕ್ಕೆ ಅನುಮತಿ ನಿಡಲಾಗುತ್ತಿದ್ದು, ಶೇ.50 ರಷ್ಟು ಪ್ರಯಾಣಿಕರಿಗೆ ಕೋವಿಡ್ ನಿಯಮ ಪಾಲಿಸಿ ಪ್ರಯಾಣಿಸಲು ಅವಕಾಶ ನೀಡಲಾಗುತ್ತಿದೆ.
24000 ವರ್ಷಗಳ ಬಳಿಕ ಮತ್ತೆ ಚಟುವಟಿಕೆಗೆ ಬಂದ ಸೂಕ್ಷ್ಮ ಜೀವಿ…!
ಚಿನ್ನದ ಅಂಗಡಿಗಳು, ಶಾಪಿಂಗ್ ಮಾಲ್, ಥಿಯೇಟರ್, ಜಿಮ್ ಸೇರಿದಂತೆ ಎಲ್ಲಾ ರೀತಿಯ ವಾಣಿಜ್ಯ ಮಳಿಗೆಗಳನ್ನು ತೆರೆಯಲು ಹಾಗೂ ಹೋಟೆಲ್, ರೆಸ್ಟೋರೆಂಟ್ ಗಳಲ್ಲಿ ಗ್ರಾಹಕರಿಗೆ ಅವಕಾಶ ನೀಡಲು ಸರ್ಕಾರ ಮುಂದಾಗಿದೆ.
ಆದರೆ ದಿನದ 8 ಗಂಟೆಗಳವರೆಗೆ ಮಾತ್ರ ವಾಣಿಜ್ಯ ವ್ಯವಹಾರಗಳಿಗೆ ಸಮಯ ನಿಗದಿ ಮಾಡಲು ಚಿಂತನೆ ನಡೆಸಿದ್ದು, ಸಾಮಾಜಿಕ, ದೈಹಿಕ ಅಂತರ, ಮಾಸ್ಕ್, ಸ್ಯಾನಿಟೈಸರ್ ಕಡ್ಡಾಯವಾಗಿದೆ.