ಬೆಂಗಳೂರು: ಪ್ರಧಾನಿ ಮೋದಿ ತಿಗಣೆ ತರ ದೇಶದ ಜನರ ರಕ್ತ ಹೀರುತ್ತಿದ್ದಾರೆ. ಒಂದೆಡೆ ಜನರು ಕೋವಿಡ್ ನಿಂದ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಇನ್ನೊಂದೆಡೆ ತೈಲ ಬೆಲೆಯಿಂದ ಹಿಡಿದು ಅಗತ್ಯ ವಸ್ತುಗಳವರೆಗೂ ಎಲ್ಲದರ ಬೆಲೆಯನ್ನೂ ಏರಿಕೆ ಮಾಡಲಾಗಿದೆ. ಜನಸಾಮಾನ್ಯರು ಬದುಕು ನಡೆಸುವುದಾದರೂ ಹೇಗೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಲ್ಲಾ ಗೊಂದಲಗಳಿಗೂ ವರಿಷ್ಠರೇ ತೆರೆ ಎಳೆಯಲಿದ್ದಾರೆ; ಏನಾಗುತ್ತೋ ನೋಡೋಣ ಎಂದ ಸಚಿವ ಯೋಗೇಶ್ವರ್
ಬೆಂಗಳೂರಿನಲ್ಲಿ ಮಾತನಾಡಿದ ಸಿದ್ದರಾಮಯ್ಯ, ಮೋದಿ, ಮೋದಿ ಎಂದು ಹುಡುಗರು ಘೋಷಣೆಗಳನ್ನು ಕೂಗುತ್ತಿದ್ದರು. ಕೊರೊನಾ ಓಡಿಸಲೆಂದು ಪ್ರಧಾನಿ ಮೋದಿ ಹೇಳಿದಂತೆ ಗಂಟೆ, ಜಾಗಟೆ, ಚಪ್ಪಾಳೆ ತಟ್ಟಲಾಯಿತು. ಆದರೆ ಮೊದಲ ಅಲೆ ಜೊತೆಗೆ ಕೊರೊನಾ ಎರಡನೆ ಅಲೆಯೂ ಆರಂಭವಾಯಿತು. ಸುಳ್ಳು ಭರವಸೆಗಳನ್ನು ನೀಡಿ ಅಧಿಕಾರಕ್ಕೇರಿದ ಮೋದಿ ಜನರ ರಕ್ತ ಹೀರುತ್ತಿದ್ದಾರೆ ಎಂಬುದು ಈಗ ಗೊತ್ತಾಗುತ್ತಿದೆ. ಮೋದಿಯವರಂತಹ ಸುಳ್ಳುಗಾರ ಮತ್ತೊಬ್ಬರಿಲ್ಲ. ಇಂಥಹ ಪ್ರಧಾನಿಯನ್ನು ಇದುವರೆಗೂ ನೋಡಿರಲಿಲ್ಲ ಎಂದು ಕಿಡಿಕಾರಿದ್ದಾರೆ.
ಅತಿ ಎತ್ತರದ ವ್ಯಕ್ತಿ ದೃಷ್ಟಿಕೋನದಲ್ಲಿ ಹೇಗೆ ಕಾಣುತ್ತೆ ಜಗತ್ತು…? ಈ ವಿಡಿಯೋಗಳಲ್ಲಿದೆ ಉತ್ತರ
ಕೊರೊನಾ ಎರಡನೇ ಅಲೆ ಬಗ್ಗೆ ಪ್ರಧಾನಿ ಮೋದಿ, ಸಿಎಂ ಬಿ.ಎಸ್.ವೈ.ಗೂ ಗೊತ್ತಿತ್ತು. ಆದರೂ ಎಚ್ಚೆತ್ತುಕೊಂಡು ಮುಂಜಾಗೃತೆ ಕ್ರಮ ಕೈಗೊಂಡಿಲ್ಲ. ಅದರ ಪರಿಣಾಮವೇ ದೇಶ ಹಾಗೂ ರಾಜ್ಯದಲ್ಲಿ ಜನರು ಪ್ರಾಣ ಕಳೆದುಕೊಳ್ಳುವಂತಾಗಿದ್ದು. ಮೊದಲೇ ಮುಂಜಾಗೃತೆ ವಹಿಸಿದ್ದರೆ ಇಂದು ಇಂತಹ ದುಃಸ್ಥಿತಿ ಎದುರಾಗುತ್ತಿರಲಿಲ್ಲ. ಲಕ್ಷಾಂತರ ಜನ ಕೋವಿಡ್ ಗೆ ಬಲಿಯಾಗಿದ್ದಾರೆ. ಆದರೆ ಸಾವಿನ ಲೆಕ್ಕಗಳನ್ನು ಕೊಡುತ್ತಿಲ್ಲ. ರಾಜ್ಯದಲ್ಲಿಯೂ ಕೋವಿಡ್ ಗೆ ಬಲಿಯಾದವರ ಬಗ್ಗೆ ಸರಿಯಾಗಿ ಮಾಹಿತಿ ನೀಡದೇ ಮುಚ್ಚಿಡುತ್ತಿದ್ದಾರೆ. ಸುಳ್ಳು ಲೆಕ್ಕಗಳನ್ನು ತೋರಿಸಲಾಗುತ್ತಿದೆ. ಡೆತ್ ಆಡಿಟ್ ನಡೆಸಿದರೆ ಸತ್ಯ ಬಹಿರಂಗವಾಗುತ್ತೆ ಎಂದು ಹೇಳಿದರು.