alex Certify ಅತಿ ಎತ್ತರದ ವ್ಯಕ್ತಿ ದೃಷ್ಟಿಕೋನದಲ್ಲಿ ಹೇಗೆ ಕಾಣುತ್ತೆ ಜಗತ್ತು…? ಈ ವಿಡಿಯೋಗಳಲ್ಲಿದೆ ಉತ್ತರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅತಿ ಎತ್ತರದ ವ್ಯಕ್ತಿ ದೃಷ್ಟಿಕೋನದಲ್ಲಿ ಹೇಗೆ ಕಾಣುತ್ತೆ ಜಗತ್ತು…? ಈ ವಿಡಿಯೋಗಳಲ್ಲಿದೆ ಉತ್ತರ

ನಮ್ಮ ಎತ್ತರಕ್ಕೆ ತಕ್ಕಂತೆ ನಾವು ನಮ್ಮ ಸುತ್ತಮುತ್ತಲಿನ ವಾತಾವರಣವನ್ನ ನೋಡುತ್ತೇನೆ. ಹಾಗಾದ್ರೆ ಅತೀ ಎತ್ತರ ಇರುವ ಮನುಷ್ಯನಿಗೆ ಈ ಜಗತ್ತು ಯಾವ ರೀತಿ ಕಾಣುತ್ತಿರಬಹುದು..?

ಅವರ ದೃಷ್ಟಿಯಲ್ಲಿ ನಾವೆಲ್ಲ ಹೇಗೆ ಕಾಣಬಹುದು ಅನ್ನೋದನ್ನ ಎಂದಾದರೂ ಅಂದಾಜಿಸಿದ್ದೀರಾ..? ಹೌದು ಎಂದಾದಲ್ಲಿ ಈ ವಿಡಿಯೋವನ್ನ ನೀವು ನೋಡಲೇಬೇಕು.

6 ಅಡಿ 11 ಇಂಚು ಎತ್ತರವಿರುವ ವ್ಯಕ್ತಿಯೊಬ್ಬ ತನ್ನ ಕಣ್ಣಿಗೆ ಈ ಜಗತ್ತು ಹೇಗೆ ಕಾಣುತ್ತೆ ಅನ್ನೋದನ್ನ ವಿಡಿಯೋ ಮೂಲಕ ತೋರಿಸಿದ್ದಾರೆ. ಸೂಪರ್​ ಮಾರ್ಕೆಟ್​ನಲ್ಲಿ ಓಡಾಡುತ್ತಿದ್ದ ಈ ಎತ್ತರದ ಮನುಷ್ಯ ತನ್ನ ದೃಷ್ಟಿಕೋನಕ್ಕೆ ಸರಿಯಾಗುವಂತೆ ವಿಡಿಯೋ ಮಾಡಿದ್ದಾರೆ.

6 ಅಡಿ 11 ಇಂಚು ಎತ್ತರವಿರುವ ಸೀನ್ ಬರ್ಗ್ಗೆ ಅನೇಕರು ನಾನು ನಿಮ್ಮಷ್ಟೇ ಎತ್ತರವಿರಬೇಕಿತ್ತು ಎಂದು ಹೇಳಿಕೊಂಡಿದ್ದರಂತೆ. ಹೀಗಾಗಿ ಈ ರೀತಿಯ ವಿಡಿಯೋ ಮಾಡಿರುವ ಸೀನ್​ ನಾನು ಜಗತ್ತನ್ನ ಯಾವ ರೀತಿ ನೋಡ್ತೇನೆ ಅನ್ನೋದನ್ನ ತೋರಿಸಿದ್ದಾರೆ.

ಸೀನ್​ ಅತೀ ಎತ್ತರ ಇರೋದ್ರಿಂದ ಇವರ ಕಣ್ಣಿಗೆ ಶೆಲ್ಫ್​​ಗಳ ಮೇಲಿರುವ ರಾಶಿ ರಾಶಿ ಧೂಳು ಕಂಡಿದೆ. ಇದಕ್ಕೆ ಸೀನ್​ ನಾನು ನೋಡೋದು ಇದನ್ನ ಎಂದು ಹೇಳಿದ್ದಾರೆ. ಇದೇ ವೇಳೆ ತಮ್ಮ ಗರ್ಲ್​ಫ್ರೆಂಡ್​ ಕಡೆಗೂ ಕ್ಯಾಮರಾ ಹಿಡಿದ ಸೀನ್​​ ಪ್ರತಿ ದಿನ, ಎಲ್ಲಾ ದಿನ ನಾನು ಈಕೆಯನ್ನ ನೋಡೋದು ಇದೇ ದೃಷ್ಟಿಕೋನದಲ್ಲಿ ಎಂದು ಹೇಳಿದ್ದಾರೆ.

ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದ್ದು ಹೆಚ್ಚೆಚ್ಚು ಪ್ರತಿಕ್ರಿಯೆಗಳನ್ನ ಗಳಿಸುತ್ತಿದೆ .

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...