
ಮುಂಬೈನ ಕುರ್ಲಾದ ಲೋಕಮಾನ್ಯ ತಿಲಕ್ ಟರ್ಮಿನಲ್ನಲ್ಲಿ ಈ ಘಟನೆ ಸಂಭವಿಸಿದೆ.
ಚಲಿಸುತ್ತಿದ್ದ ರೈಲನ್ನ ಪ್ರಯಾಣಿಕ ಹತ್ತಲು ಪ್ರಯತ್ನಿಸಿದ ವೇಳೆ ಈ ಅವಘಡ ಸಂಭವಿಸಿದೆ. ಇನ್ನೇನು ಪ್ರಯಾಣಿಕ ರೈಲ್ವೆ ಚಕ್ರದಡಿಗೆ ಸಿಲುಕೇ ಬಿಟ್ಟ ಅನ್ನೋವಷ್ಟರಲ್ಲಿ ಆರ್ಪಿಎಫ್ ಕಾನ್ಸ್ಟೇಬಲ್ ಆತನನ್ನ ಕಾಪಾಡಿದ್ದಾರೆ.
ಕೆಲ ಗಂಟೆಗಳಲ್ಲೇ ನಿರ್ಧಾರವಾಗುತ್ತಾ ಅನ್ಲಾಕ್ ಭವಿಷ್ಯ….? ಮಹತ್ವದ ಸಭೆ ಕರೆದ ಸಿಎಂ
ಇದೇ ರೀತಿ ಗೋವಾದ ವಾಸ್ಕೋ ರೈಲ್ವೆ ನಿಲ್ದಾಣದಲ್ಲೂ ಇಂತಹದ್ದೇ ಘಟನೆಯೊಂದು ಸಂಭವಿಸಿದೆ. ರೈಲ್ವೆ ಸಚಿವಾಲಯ ಶೇರ್ ಮಾಡಿರುವ ಸಿಸಿ ಟಿವಿ ದೃಶ್ಯಾವಳಿಯಲ್ಲಿ ಚಲಿಸುತ್ತಿದ್ದ ರೈಲನ್ನು ಹತ್ತಬೇಕು ಎಂದು ನಿಲ್ದಾಣದಲ್ಲಿ ಜೋರಾಗಿ ಓಡಿದ್ದಾನೆ. ಆದರೆ ಓಡುವ ಭರದಲ್ಲಿ ಆತ ಆಯತಪ್ಪಿದ ಪರಿಣಾಮವಾಗಿ ಆತ ಕೆಳಕ್ಕೆ ಬಿದ್ದಿದ್ದಾನೆ. ಅಷ್ಟರಲ್ಲೇ ಸ್ಥಳಕ್ಕೆ ಧಾವಿಸಿದ ಆರ್ಪಿಎಫ್ ಸಿಬ್ಬಂದಿ ಪ್ರಯಾಣಿಕನನ್ನ ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ.