ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಆತ್ಮನಿರ್ಭರತೆಯ ಕೂಗನ್ನು ಬಹಳ ಸೀರಿಯಸ್ ಆಗಿ ತೆಗೆದುಕೊಂಡಂತೆ ಕಾಣುವ ಆನೆಯೊಂದು ದಾಹ ನೀಗಿಸಿಕೊಳ್ಳಲು ಖುದ್ದು ತಾನೇ ಕೈಪಂಪ್ ಒತ್ತಿಕೊಳ್ಳುತ್ತಿರುವ ವಿಡಿಯೋವೊಂದು ನೆಟ್ಟಿಗರಿಗೆ ಭಾರೀ ಲೈಕ್ ಆದಂತೆ ಕಾಣುತ್ತಿದೆ.
ಕಪ್ ಸಿಗಿಸಿಕೊಂಡು ಪರದಾಡುತ್ತಿದ್ದ ಅಳಿಲಿನ ರಕ್ಷಣೆ
ಮಾನವರನ್ನು ಅನುಕರಣೆ ಮಾಡುವ ತನ್ನ ಈ ಕ್ಷಮತೆಯನ್ನು ತೋರುತ್ತಿರುವ ಈ ಆನೆ ತನ್ನ ಸೊಂಡಿಲನ್ನು ಬಳಸಿಕೊಂಡು ನೀರು ಪಂಪ್ ಮಾಡಿಕೊಳ್ಳುತ್ತಿರುವ ವಿಡಿಯೋ ವೈರಲ್ ಆಗಿದೆ.
ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ‘ಮಾಸ್ಕ್’ ಅನಿವಾರ್ಯವಲ್ಲ
ಆನೆಗೆ ತನ್ನ ತೂಕವೇನೆಂದು ಗೊತ್ತಿದ್ದು, ಕೈಪಂಪ್ಗೆ ಎಷ್ಟು ಮಾತ್ರದ ಭಾರ ಹಾಕಬೇಕೆಂದು ತಿಳಿದಂತೆ ಕಾಣುತ್ತಿದ್ದು, ಬಲು ನಾಜೂಕಾಗಿ ಕೈಪಂಪ್ ಒತ್ತುತ್ತಿದೆ ಈ ಗಜ. ಭಾರತೀಯ ಅರಣ್ಯ ಸೇವೆ ಅಧಿಕಾರಿ ಸುಶಾಂತಾ ನಂದಾ ಈ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ.
https://twitter.com/yashagarwal2002/status/1402500666317172737?ref_src=twsrc%5Etfw%7Ctwcamp%5Etweetembed%7Ctwterm%5E1402500666317172737%7Ctwgr%5E%7Ctwcon%5Es1_&ref_url=https%3A%2F%2Fwww.india.com%2Fviral%2Fviral-video-intelligent-elephant-uses-handpump-to-drink-water-like-humans-people-call-him-atmanirbhar-4728855%2F