ಕೊರೊನಾದ ವಿರುದ್ಧದ ಹೋರಾಟ ಆರಂಭವಾದಾಗಿನಿಂದ ವೈದ್ಯಲೋಕ ಜೀವದ ಹಂಗನ್ನೂ ಬಿಟ್ಟು ಹಗಲಿರುಳೆನ್ನದೇ ರೋಗಿಗಳ ಜೀವವನ್ನ ಕಾಪಾಡಲು ಶ್ರಮಿಸುತ್ತಿದೆ. ಐಸೋಲೇಷನ್ನಲ್ಲಿ ಇದ್ದ ವೇಳೆ ರೋಗಿಗಳ ಸಂಬಂಧಿಕರಿಗೂ ರೋಗಿಗಳನ್ನ ಭೇಟಿಯಾಗುವ ಅವಕಾಶ ಇರದ ಕಾರಣ ಆರೋಗ್ಯ ಕಾರ್ಯಕರ್ತರೇ ಎಲ್ಲವನ್ನ ನೋಡಿಕೊಳ್ಳಬೇಕಿದೆ.
‘ಲಾಕ್ಡೌನ್’ ನಿಂದ ತತ್ತರಿಸಿದ ಜನತೆಗೆ ಸಿಹಿ ಸುದ್ದಿ, ‘ಅನ್ಲಾಕ್’ ಬಗ್ಗೆ ಇಂದು ಮಹತ್ವದ ನಿರ್ಧಾರ
ಓಡಿಶಾದ ಗಂಜಮ್ ಜಿಲ್ಲೆಯ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಿದ್ದು ಮಾತ್ರವಲ್ಲದೇ ಆಸ್ಪತ್ರೆ ಸಿಬ್ಬಂದಿ ಅವರ ಗಡ್ಡ ಶೇವ್ ಮಾಡುವುದು ಹಾಗೂ ಅವರ ಕೂದಲನ್ನ ಕತ್ತರಿಸುವ ಕಾರ್ಯವನ್ನೂ ಮಾಡಿದ್ದಾರೆ.
ವಿಮಾನ ಪ್ರಯಾಣದಲ್ಲಿ ಇವೆಲ್ಲವೂ ನಿಮ್ಮ ಜೊತೆಗಿರಲಿ
ಎಂಕೆಸಿಜೆ ಮೆಡಿಕಲ್ ಕಾಲೇಜಿನ ಸಿಬ್ಬಂದಿಯ ಈ ಮಾನವೀಯ ಕಾರ್ಯದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಲ್ಲದೇ ತಮ್ಮ ಎಂದಿನ ಕರ್ತವ್ಯವನ್ನೂ ಮೀರಿ ಈ ರೀತಿಯಲ್ಲೂ ರೋಗಿಗಳಿಗೆ ನೆರವಾಗುತ್ತಿರುವ ಸಿಬ್ಬಂದಿಯ ಕಾರ್ಯಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸ್ತಾ ಇದ್ದಾರೆ.