ಯಾವುದೇ ವೃತ್ತಿಯಲ್ಲಿರುವ ಮಂದಿಗೂ ನೃತ್ಯವು ಬಹಳ ಸಂತಸ ತರುವ ವಿಚಾರವಾಗಿದೆ. ಇದರಿಂದ ಅವರಿಗೆ ಕೆಲಸದ ಒತ್ತಡ ಸಹ ಕಡಿಮೆಯಾಗುತ್ತದೆ.
ಇಂತಹ ಒಬ್ಬ ವ್ಯಕ್ತಿ ಡಾ. ಅರೂಪ್ ಸೇನಾಪತಿ. ’ಡ್ಯಾನ್ಸಿಂಗ್ ಡಾಕ್ಟರ್’ ಎಂದೇ ಖ್ಯಾತರಾದ ಅಸ್ಸಾಂ ಮೂಲದ ಈ ವೈದ್ಯ, ತಮ್ಮ ವಿಶಿಷ್ಟ ಮ್ಯಾನರಿಸಂನಿಂದ ಅಂತರ್ಜಾಲದಲ್ಲಿ ಬಹಳ ವೈರಲ್ ಆಗಿದ್ದಾರೆ. ಎರಡು ದಿನಗಳ ಹಿಂದೆ ಇನ್ಸ್ಟಾಗ್ರಾಂನಲ್ಲಿ ಈ ವಿಡಿಯೋ ಶೇರ್ ಮಾಡಲಾಗಿದ್ದು, ಬಿಳಿ ಕೋಟ್ನಲ್ಲಿ ಸ್ಟೆತೋಸ್ಕೋಪ್ ಅನ್ನು ತಮ್ಮ ಕತ್ತಿನ ಸುತ್ತಲೂ ಹಾಕಿಕೊಂಡು ಮುಖಕ್ಕೊಂದು ಮಾಸ್ಕ್ ಧರಿಸಿಕೊಂಡು ಸ್ಟೆಪ್ ಹಾಕಿದ್ದಾರೆ.
ಭಾರತಕ್ಕೆ ಬರಲಿದೆ ಮತ್ತೊಂದು ರಾಮಬಾಣ: 5 ಕೋಟಿ ಲಸಿಕೆ ನೀಡಲು ಮುಂದಾದ ಫೈಜರ್
’ಫಲಕ್ ತಕ್ ಚಲ್’ ಹೆಸರಿನ ಈ ರೀಮಿಕ್ಸ್ ಹಾಡು ’ತಶನ್’ ಚಿತ್ರದ್ದಾಗಿದ್ದು, ನಟರಾದ ಅಕ್ಷಯ್ ಕುಮಾರ್, ಕರೀನಾ ಕಪೂರ್, ಸೈಫ್ ಅಲಿಖಾನ್ ಹಾಗೂ ಅನಿಲ್ ಕಪೂರ್ ನಟಿಸಿದ್ದಾರೆ. ಭಾರೀ ಸರಾಗವಾಗಿ ನೃತ್ಯದ ಸ್ಟೆಪ್ಗಳನ್ನು ವೈದ್ಯರು ಹಾಕುತ್ತಿದ್ದಾರೆ.
ಭಾವುಕರನ್ನಾಗಿಸುತ್ತೆ ಕತ್ತೆ ಹಾಗೂ ಬಾಲಕಿಯ ಈ ಮುದ್ದಾದ ವಿಡಿಯೋ
“ಒತ್ತಡ ಹಾಗೂ ದಣಿವಿನ ದಿನಗಳನ್ನು ನಿಭಾಯಿಸಲು ನನಗೆ ಬೇರೆ ಯಾವುದೇ ಮಾರ್ಗವಿಲ್ಲ” ಎಂದು ಕ್ಯಾಪ್ಷನ್ ಹಾಕಿಕೊಂಡು ತಮ್ಮ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ ಅರೂಪ್ ಸೇನಾಪತಿ.
https://www.instagram.com/p/CPQXj5uHa3r/?utm_source=ig_web_copy_link