alex Certify ಭಾರತಕ್ಕೆ ಬರಲಿದೆ ಮತ್ತೊಂದು ರಾಮಬಾಣ: 5 ಕೋಟಿ ಲಸಿಕೆ ನೀಡಲು ಮುಂದಾದ ಫೈಜರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತಕ್ಕೆ ಬರಲಿದೆ ಮತ್ತೊಂದು ರಾಮಬಾಣ: 5 ಕೋಟಿ ಲಸಿಕೆ ನೀಡಲು ಮುಂದಾದ ಫೈಜರ್

ಭಾರತದಲ್ಲಿರುವ ರೂಪಾಂತರಿ ಕೊರೊನಾ ವೈರಸ್​ ವಿರುದ್ಧ ನಮ್ಮ ಲಸಿಕೆ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲಿದೆ ಎಂದು ಲಸಿಕಾ ಉತ್ಪಾದನಾ ಸಂಸ್ಥೆಯಾದ ಫೈಜರ್​ ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಿದೆ.

ಭಾರತದಲ್ಲಿ ಕೊರೊನಾ ಎರಡನೆ ಅಲೆ ಇಷ್ಟೊಂದು ಗಂಭೀರ ಪ್ರಮಾಣದಲ್ಲಿ ವ್ಯಾಪಿಸಲು ಈ ರೂಪಾಂತರಿ ವೈರಸ್​ ಕಾರಣ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಅಲ್ಲದೇ ಫೈಜರ್​ ಲಸಿಕೆಯನ್ನ 12 ವರ್ಷ ಮೇಲ್ಪಟ್ಟ ಎಲ್ಲರಿಗೂ ನೀಡಬಹುದಾಗಿದ್ದು ಭಾರತಕ್ಕೆ 5 ಕೋಟಿ ಲಸಿಕೆ ನೀಡಲು ಸಿದ್ಧರಿದ್ದೇವೆ ಎಂದು ಹೇಳಿದೆ. ಹೀಗಾಗಿ ಕೇಂದ್ರ ಸರ್ಕಾರದ ಜೊತೆಗೆ ಫೈಜರ್​ ಲಸಿಕೆಯ ತುರ್ತು ಅನುಮೋದನೆಗಾಗಿ ಲಸಿಕಾ ಉತ್ಪಾದನಾ ಸಂಸ್ಥೆ ಮಾತುಕತೆ ನಡೆಸುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...