alex Certify ಕಾಂಟ್ಯಾಕ್ಟ್​ ಲೆನ್ಸ್​ ತೆಗೆಯಲು ಅತ್ಯಂತ ಸುಲಭ ವಿಧಾನ ಪರಿಚಯಿಸಿದ ಯುವತಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾಂಟ್ಯಾಕ್ಟ್​ ಲೆನ್ಸ್​ ತೆಗೆಯಲು ಅತ್ಯಂತ ಸುಲಭ ವಿಧಾನ ಪರಿಚಯಿಸಿದ ಯುವತಿ….!

ಕಾಂಟ್ಯಾಕ್ಟ್ ಲೆನ್ಸ್​ನ್ನು ಹಾಕೋದು ಹಾಗೂ ತೆಗೆಯೋದು ಸುಲಭದ ಕೆಲಸವಂತೂ ಇಲ್ಲ. ಕೆಲವೊಮ್ಮೆ ಈ ಲೆನ್ಸ್​ಗಳನ್ನ ತೆಗೆಯುವ ಭರದಲ್ಲಿ ಕಣ್ಣಿಗೆ ಹಾನಿ ಮಾಡಿಕೊಳ್ಳುವಂತಹ ಉದಾಹರಣೆಗಳನ್ನೂ ಕಂಡಿದ್ದೇವೆ.

ಯಾರಿಗೆ ಬೇಕಾದರೂ ಸೂಕ್ತವಾದ ರೀತಿಯಲ್ಲಿ ಲೆನ್ಸ್​ಗಳು ಸಿಗುತ್ತವೆ ಆದರೆ ಅದನ್ನ ರಾತ್ರಿ ಮಲಗುವ ವೇಳೆ ತೆಗೆದಿಡೋದು ಎಲ್ಲರ ಕೈಲಿಂದಲೂ ಆಗುವ ಕೆಲಸವಂತೂ ಅಲ್ಲವೇ ಅಲ್ಲ.

ಆದರೆ ಟಿಕ್​ಟಾಕ್​ನಲ್ಲಿ ಯುವತಿಯೊಬ್ಬಳು ಲೆನ್ಸ್​ಗಳನ್ನ ತೆಗೆಯುವ ಸುಲಭ ವಿಧಾನವೊಂದನ್ನ ಪರಿಚಯಿಸಿದ್ದು ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಈ ಕಷ್ಟದ ಕೆಲಸವನ್ನ ಈಕೆ ಕೆಲವೇ ಸೆಕೆಂಡ್​ಗಳಲ್ಲಿ ಮಾಡಿ ತೋರಿಸಿದ್ದಾಳೆ.

ಕೊರೊನಾ ಲಸಿಕೆ ಹಾಕಿಸಿಕೊಂಡವರಿಗೆ ಇಲ್ಲಿ ಸಿಗುತ್ತೆ ಹಣ..!

ಟಿಕ್​ ಟಾಕ್​ ಬಳಕೆದಾರ್ತಿ ಲಾಲಾ ಎಂಬವರು ಈ ವಿಡಿಯೋವನ್ನ ಪೋಸ್ಟ್ ಮಾಡಿದ್ದಾರೆ. ಕಣ್ಣುಗಡ್ಡೆಯನ್ನ ತಿರುಗಿಸಿ ಬಳಿಕ ಕಣ್ಣನ್ನ ಮುಚ್ಚಿ ಈಕೆ ಲೆನ್ಸ್​ನ್ನು ಹೊರತೆಗೆದಿದ್ದಾಳೆ. ಈ ವಿಡಿಯೋ ನೋಡಿದ ನೆಟ್ಟಿಗರು ಕಷ್ಟದ ಕೆಲಸಕ್ಕೆ ಪರಿಹಾರ ತಿಳಿಸಿದ್ದಕ್ಕೆ ಲಾಲಾಗೆ ಧನ್ಯವಾದ ತಿಳಿಸ್ತಿದ್ದಾರೆ. ಈ ವಿಡಿಯೋ 2 ಮಿಲಿಯನ್​ಗೂ ಅಧಿಕ ವೀವ್ಸ್ ಸಂಪಾದಿಸಿದೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...