alex Certify ಟಿಕ್‌ಟಾಕ್‌ನಲ್ಲಿ ವೈರಲ್ ಆದ ಖಾದ್ಯ ತಯಾರಿಸಲು ಹೋಗಿ ಮುಖ ಸುಟ್ಟುಕೊಂಡ ಮಹಿಳೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟಿಕ್‌ಟಾಕ್‌ನಲ್ಲಿ ವೈರಲ್ ಆದ ಖಾದ್ಯ ತಯಾರಿಸಲು ಹೋಗಿ ಮುಖ ಸುಟ್ಟುಕೊಂಡ ಮಹಿಳೆ

ಟಿಕ್‌ಟಾಕ್‌ನಲ್ಲಿ ವೈರಲ್ ಆಗಿದ್ದ ವಿಡಿಯೋವೊಂದನ್ನು ನೋಡಿಕೊಂಡು ಮೊಟ್ಟೆಯನ್ನು ಬೇಯಿಸಲು ಮುಂದಾದ ಮಹಿಳೆಯೊಬ್ಬರು ತಮ್ಮ ಮುಖ ಸುಟ್ಟುಕೊಂಡಿದ್ದಾರೆ.

ಶಾಫಿಯಾ ಬಾಶೀರ್‌, 37, ಮೊಟ್ಟೆಯನ್ನು ಬೇಯಿಸಿಕೊಳ್ಳಲು ಮುಂದಾದ ವೇಳೆ ಈ ಆನಾಹುತ ಸಂಭವಿಸಿದೆ. ಟ್ರೆಂಡ್‌ಗಳನ್ನು ಫಾಲೋ ಮಾಡಿ ತಾವು ಪಡುತ್ತಿರುವ ಪಾಡನ್ನು ಅನುಭವಿಸಬೇಡಿ ಎಂದು ಬಾಶೀರ್‌ ಎಲ್ಲರನ್ನೂ ವಿನಂತಿಸಿಕೊಳ್ಳುತ್ತಿದ್ದಾರೆ.

ಕುದಿಯುವ ನೀರಿದ್ದ ಮಗ್‌ನಲ್ಲಿ ಮೊಟ್ಟೆಗಳನ್ನು ಹಾಕಿದ ಈಕೆ ಬಳಿಕ ಅವುಗಳನ್ನು ಎರಡು ನಿಮಿಷಗಳ ಮಟ್ಟಿಗೆ ಮೈಕ್ರೋವೇವ್‌ನಲ್ಲಿ ಇರಿಸಿದ್ದಾರೆ. ಇದಾದ ಬಳಿಕ ಮೊಟ್ಟೆಯ ಮೇಲೆ ತಣ್ಣಗಿನ ಚಮಚವೊಂದನ್ನು ಮೊಟ್ಟೆಯ ಮೇಲಿಡುತ್ತಲೇ ಮೊಟ್ಟೆ ಒಡೆದು ಕಾರಂಜಿಯ ರೀತಿ ಚಿಮ್ಮಿ ಆಕೆಯ ಮುಖದ ಬಲಭಾಗದಲ್ಲಿ ಮೆತ್ತಿಕೊಂಡಿದೆ.

ಕೂಡಲೇ ತನ್ನ ಮುಖವನ್ನು ತಣ್ಣನೆಯ ನೀರಿಗೆ ಕೊಟ್ಟುಕೊಂಡ ಈಕೆ ಆಸ್ಪತ್ರೆಗೆ ತೆರಳಿದ್ದಾರೆ. 12 ಗಂಟೆಗಳ ಕಾಲ ಉರಿ ಕಡಿಮೆಯಾಗಿದೆ. ಅದೃಷ್ಟವಶಾತ್‌ ಆಕೆಯ ಮುಖದ ಮೇಲೆ ಯಾವುದೇ ಕಲೆಗಳು ಸೃಷ್ಟಿಯಾಗಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...