alex Certify ವಿಧವೆ ಜೊತೆ ಮರು ವಿವಾಹವಾದ 71 ವರ್ಷದ ವಿಧುರ: ನೆಟ್ಟಿಗರಿಂದ ಶುಭಾಶಯಗಳ ಸುರಿಮಳೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಧವೆ ಜೊತೆ ಮರು ವಿವಾಹವಾದ 71 ವರ್ಷದ ವಿಧುರ: ನೆಟ್ಟಿಗರಿಂದ ಶುಭಾಶಯಗಳ ಸುರಿಮಳೆ

ಭಾರತದಲ್ಲಿ ಎರಡನೇ ಮದುವೆಯಾಗಬೇಕು ಎಂದರೆ ಸಿಕ್ಕಾಪಟ್ಟೆ ಸವಾಲುಗಳನ್ನ ಎದುರಿಸಬೇಕು. ಅದರಲ್ಲೂ ನೀವು ವೃದ್ಧಾಪ್ಯದಲ್ಲಿದ್ದರಂತೂ ಸಮಾಜವನ್ನ ಒಪ್ಪಿಸೋದು ತುಂಬಾನೇ ಕಷ್ಟ. ಜಗತ್ತಿನಲ್ಲಿ ಎಲ್ಲರಿಗೂ ಸಂಗಾತಿಯನ್ನ ಹೊಂದುವ ಅಧಿಕಾರ ಇದೆ. ಯಾರೂ ಕೂಡ ಒಂಟಿಯಾಗಿರಬೇಕು ಎಂದಿಲ್ಲ. ಇದೇ ಮಾತಿಗೆ ಸಾಕ್ಷಿಯಾದ 71 ವರ್ಷದ ವೃದ್ಧರೊಬ್ಬರು ವಿಧವೆ ಮಹಿಳೆಯನ್ನ ಮರು ವಿವಾಹವಾಗಿದ್ದಾರೆ. ಈ ಫೋಟೋವನ್ನ ಸ್ವತಃ ಪುತ್ರಿ ಟ್ವಿಟರ್​ನಲ್ಲಿ ಶೇರ್ ಮಾಡಿದ್ದಾರೆ. ಈ ಫೋಟೋ ನೋಡಿದ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಫೋಟೋಗಳನ್ನ ಶೇರ್​ ಮಾಡಿರುವ ವೃದ್ಧನ ಪುತ್ರಿ ಅದಿತಿ, ಇವರು ನನ್ನ 71 ವರ್ಷದ ತಂದೆ. 5 ವರ್ಷಗಳಿಂದ ವಿದುರನಾಗಿದ್ದ ಇವರು ಇದೀಗ ವಿಧವೆಯನ್ನೇ ವಿವಾಹವಾಗಿದ್ದಾರೆ. ಜಗತ್ತಿನಲ್ಲಿ ಯಾರೂ ಒಂಟಿಯಾಗಿರಬಾರದು. ಹೀಗಾಗಿ ನನ್ನ ತಂದೆ ಮರು ಮದುವೆಯಾಗಬೇಕೆಂದು ನಾನೆಂದಿಗೂ ಆಶಿಸುತ್ತಿದ್ದೆ ಎಂದು ಬರೆದಿದ್ದಾರೆ.

‘ಕೊರೊನಾ’ ವಿರುದ್ಧದ ಭಾರತದ ಹೋರಾಟಕ್ಕೆ ಚೀನಾ ಕಂಪನಿಗಳ ಸಾಥ್

ಆದರೆ ಈ ಮರು ವಿವಾಹವಾಗೋದು ಸುಲಭದ ಕೆಲಸವಂತೂ ಆಗಿರಲಿಲ್ಲ. ಮರು ಮದುವೆಗೆ ಭಾರತದಲ್ಲಿ ಯಾವುದೇ ನಿರ್ದಿಷ್ಟ ಕಾರಣ ಇಲ್ಲ. ಅನೇಕರು ಹಣಕ್ಕಾಗಿ ಡಿಮ್ಯಾಂಡ್​ ಇಟ್ಟರೆ ಇನ್ನು ಕೆಲವರು ವಿವಿಧ ರೀತಿಯಲ್ಲಿ ಕಾಡಿದ್ದರು. ಇವರನ್ನ ಸಮಾಜ ಒಪ್ಪುತ್ತದೆಯೋ ಇಲ್ಲವೋ ಅನ್ನೋದು ನಮಗೂ ತಿಳಿದಿಲ್ಲ ಎಂದು ಅದಿತಿ ಕಳವಳ ವ್ಯಕ್ತಪಡಿಸಿದ್ದಾರೆ. ಆದರೆ ಟ್ವಿಟರ್​​ನಲ್ಲಿ ಮಾತ್ರ ನೆಟ್ಟಿಗರು ಈ ಜೋಡಿಗೆ ಶುಭಾಶಯಗಳ ಸುರಿಮಳೆಯನ್ನೇ ಹರಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...