alex Certify ಅನೈತಿಕ ಸಂಬಂಧದ ಶಂಕೆ: ವಿಧವೆ ವಿವಸ್ತ್ರಗೊಳಿಸಿ ಥಳಿಸಿದ ಮಹಿಳೆಯರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅನೈತಿಕ ಸಂಬಂಧದ ಶಂಕೆ: ವಿಧವೆ ವಿವಸ್ತ್ರಗೊಳಿಸಿ ಥಳಿಸಿದ ಮಹಿಳೆಯರು

ರಾಜಸ್ಥಾನದ ಉದಯಪುರದಲ್ಲಿ ಅನೈತಿಕ ಸಂಬಂಧದ ಶಂಕೆಯಿಂದ ವಿಧವೆಯ ಮರಕ್ಕೆ ಕಟ್ಟಿಹಾಕಿದ ಮಹಿಳೆಯರ ಗುಂಪೊಂದು ಹಲ್ಲೆ ನಡೆಸಿದೆ.

ಮಹಿಳೆಯನ್ನು ವಿವಸ್ತ್ರಗೊಳಿಸಲಾಗಿದ್ದು, 12 ಮಹಿಳೆಯರ ಗುಂಪು ವಿಧವೆಯ ಕೂದಲು ಕತ್ತರಿಸಿದೆ. ಜೂನ್ 29 ರಂದು ಉದಯಪುರದ ದೇವ್ಲಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವಿಷಯವು ಮುನ್ನೆಲೆಗೆ ಬಂದಿದೆ. ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳ ಪತ್ತೆಗೆ ತಂಡಗಳನ್ನು ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಾವು ಐಟಿ ಕಾಯ್ದೆಯ ಸೆಕ್ಷನ್‌ ಗಳು ಮತ್ತು ಐಪಿಸಿಯ ಇತರ ಸಂಬಂಧಿತ ಸೆಕ್ಷನ್‌ ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದೇವೆ. ಆರೋಪಿಗಳ ಬಂಧನಕ್ಕೆ ತಂಡಗಳನ್ನು ಕಳುಹಿಸಲಾಗಿದೆ. ನಾವು ಸಂತ್ರಸ್ತ ಮಹಿಳೆಗೆ ಸಾಧ್ಯವಿರುವ ಎಲ್ಲ ರೀತಿಯಲ್ಲಿ ಸಹಾಯ ಮಾಡುತ್ತೇವೆ ಎಂದು ಉದಯಪುರ ಪೊಲೀಸ್ ವರಿಷ್ಠಾಧಿಕಾರಿ(ಎಸ್‌ಪಿ) ಭುವನ್ ಭೂಷಣ್ ಯಾದವ್ ಹೇಳಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...