ಕೊರೊನಾ ಎರಡನೇ ಅಲೆಯ ಭೀಕರತೆ ದೇಶವನ್ನೇ ಬೆಚ್ಚಿ ಬೀಳಿಸಿದೆ. ವೈದ್ಯಕೀಯ ಸೌಲಭ್ಯದ ಕೊರತೆಯಿಂದಾಗಿ ಜನರು ಕಂಗಾಲಾಗಿ ಹೋಗಿದ್ದಾರೆ.
ಅನೇಕರು ಆಕ್ಸಿಜನ್ ಸಿಲಿಂಡರ್ಗಾಗಿ ಹುಡುಕಾಟ ನಡೆಸಿದ್ರೆ ಇನ್ನೂ ಹಲವರು ಆಸ್ಪತ್ರೆ ಬೆಡ್ಗಾಗಿ ಪರದಾಡುತ್ತಿದ್ದಾರೆ. ಈ ನಡುವೆ ಔಷಧಿಗಳ ಕೊರತೆ ಕೂಡ ಭಾರೀ ಆಘಾತವನ್ನ ತಂದೊಡ್ಡಿದೆ.
ಪಿಪಿಇ ಕಿಟ್ ಧರಿಸಿಯೇ ಸಪ್ತಪದಿ ತುಳಿದ ಜೋಡಿ: ವಿಡಿಯೋ ವೈರಲ್
ಇದೆಲ್ಲದರ ನಡುವೆ ಜಾರ್ಖಂಡ್ನಲ್ಲಿ ಕೋವಿಡ್ ಸೋಂಕಿತನನ್ನ ಸಾಗಿಸಲು ಸ್ಟ್ರೆಚರ್ ಸಿಗದ ಕಾರಣ ಬೈಕ್ನಲ್ಲೇ ಸಾಗಿಸಿದ ದಾರುಣ ಘಟನೆ ವರದಿಯಾಗಿದೆ. ಪಲಮುವಿನ ಮೆಡಿನಿರೈ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ನಡೆದ ಈ ದೃಶ್ಯವನ್ನ ಚಿತ್ರೀಕರಿಸಲಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ವಿಡಿಯೋದಲ್ಲಿ ಇಬ್ಬರು ಬೈಕ್ ಸವಾರರ ಮಧ್ಯೆ ವೃದ್ಧ ಕೊರೊನಾ ಸೋಂಕಿತ ಇರೋದನ್ನ ನೀವು ಕಾಣಬಹುದಾಗಿದೆ. ಈತನನ್ನ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿತ್ತೇ ಇಲ್ಲವೇ ಬೇರೆ ಆಸ್ಪತ್ರೆಗೆ ವರ್ಗಾವಣೆ ಮಾಡಲು ಕರೆದುಕೊಂಡು ಹೋಗಲಾಗಿತ್ತೇ ಅನ್ನೋದು ಇನ್ನೂ ಅಸ್ಪಷ್ಟವಾಗಿದೆ.