ಮನೆಯಲ್ಲೇ ಕೊರೊನಾಗೆ ಚಿಕಿತ್ಸೆ ಪಡೆಯುವವರ ಸಂಖ್ಯೆಯಲ್ಲಿ ಭಾರೀ ಏರಿಕೆಯಾಗಿದೆ. ಇದಕ್ಕೆ ಮುಖ್ಯ ಕಾರಣ ಆಸ್ಪತ್ರೆಗಳಲ್ಲಿ ಬೆಡ್ ಇಲ್ಲದಿರುವುದು, ಅದೇನೇ ಇರಲಿ ನೀವು ಮನೆಯಲ್ಲಿ ಚಿಕಿತ್ಸೆ ಪಡೆಯುವಾಗ ಈ ಎಚ್ಚರಿಕಾ ಕ್ರಮಗಳನ್ನು ಮರೆಯದೆ ಅನುಸರಿಸಿ.
ಮನೆಯಲ್ಲೇ ಪ್ರತ್ಯೇಕವಾದ ಕೋಣೆಯಲ್ಲಿ ರೋಗಿಯನ್ನು ಇಡುವುದು ಎಂದರೆ ಆ ಕೋಣೆಗೆ ಸರಿಯಾಗಿ ಗಾಳಿ ಬೆಳಕು ಬರುವಂತಿರಬೇಕು. ಪ್ರತ್ಯೇಕ ಶೌಚಾಲಯ ಇರಬೇಕು. ಇದನ್ನು ರೋಗಿಯ ಹೊರತಾಗಿ ಇತರರು ಬಳಸುವುದು ಒಳ್ಳೆಯದಲ್ಲ.
ವರನಿಗೆ ಕೊರೋನಾ, ಪಿಪಿಇ ಕಿಟ್ ಧರಿಸಿ ಬಂದ ವಧು – ಕೋವಿಡ್ ಆಸ್ಪತ್ರೆಯಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ
ಬೆಳಗ್ಗೆ ಮತ್ತೆ ಸಂಜೆ ವೇಳೆ ಸೂರ್ಯನ ಕಿರಣಗಳು ಒಳಬರುವಂತೆ ಕೊಠಡಿಯ ಕಿಟಕಿಗಳನ್ನು ತೆಗೆದಿಡುವುದು ಇನ್ನೂ ಒಳ್ಳೆಯದು. ಮಾಸ್ಕ್ ಧರಿಸಿಕೊಂಡೇ ಇರಿ. ಊಟದ ತಟ್ಟೆ, ಲೋಟಗಳನ್ನು ಪ್ರತ್ಯೇಕವಾಗಿ ಇಟ್ಟುಕೊಳ್ಳಿ. ಮನೆಯ ಇತರ ಸದಸ್ಯರಿಗೆ ಅದನ್ನು ಬಳಸಲು ಕೊಡದಿರಿ.
ಮನೆಮಂದಿಯೊಂದಿಗೆ ಮಾತನಾಡಬೇಕೆಂದಿದ್ದರೆ ಫೋನ್ ಬಳಸಿ. ಅರ್ಧ ತೆಗೆದ ಬಾಗಿಲಿನ ಮೂಲಕ ಸಂಭಾಷಣೆ ನಡೆಸುವುದು ಬೇಡ. ರೂಮಿನಲ್ಲಿ ಸ್ಯಾನಿಟೈಸರ್ ಇಟ್ಟುಕೊಳ್ಳಿ. 2-3 ಗಂಟೆಗೊಮ್ಮೆ ಜ್ವರ ಪರೀಕ್ಷಿಸಿಕೊಳ್ಳಿ.