ಮೊಟ್ಟೆ ಎಂದುಕೊಂಡು ಏರ್ಪಾಡ್ಗಳನ್ನೇ ತಿಂದು ತೇಗಿದೆ ಈ ಶ್ವಾನ…..! 19-04-2021 11:25AM IST / No Comments / Posted In: Latest News, International ಈಸ್ಟರ್ ಹಬ್ಬದ ಸಿಹಿ ತಿಂಡಿ ಎಂದು ಭಾವಿಸಿ ಗೋಲ್ಡನ್ ರಿಟ್ರೈವರ್ ಶ್ವಾನ ಏರ್ಪಾಡ್ಸ್ ನುಂಗಿ ಹಾಕಿದ್ದು ಈ ವಿಚಾರ ತಿಳಿದ ಶ್ವಾನದ ಮಾಲೀಕೆ ರಷೆಲ್ ಹಿಕ್ಸ್ ಶಾಕ್ ಆಗಿದ್ದಾರೆ. ಈಸ್ಟರ್ ಭಾನುವಾರದಂದು ಶ್ವಾನಕ್ಕೆ ರಷೆಲ್ ಈಸ್ಟರ್ ಎಗ್ನ್ನು ಸವಿಯಲು ನೀಡಿದ್ದರು. ಆದರೆ ಈ ವೇಳೆಯಲ್ಲಿ ರಷೆಲ್ ಪಾಕೆಟ್ನಿಂದ ಏರ್ಪಾಡ್ಗಳು ಬಿದ್ದು ಹೋಗಿದ್ದವು. ನೆಲದ ಮೇಲೆ ಬಿದ್ದಿದ್ದ ಏರ್ ಪಾಡ್ಗಳನ್ನ ರಷೆಲ್ ಎತ್ತಿಕೊಳ್ಳುವ ಮುನ್ನವೇ ಶ್ವಾನ ಅದನ್ನ ನುಂಗಿ ಹಾಕಿದೆ. ಕೂಡಲೇ ಶ್ವಾನವನ್ನ ರಷೆಲ್ ಪಶು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಕೂಡಲೇ ಹಿರಿಯ ಪಶು ವೈದ್ಯ ಸುಸಾನಾ ಜೌರೆಗಿ ಶ್ವಾನಕ್ಕೆ ತುರ್ತು ಶಸ್ತ್ರಚಿಕಿತ್ಸೆ ಕೈಗೊಂಡ್ರು. ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಮುಗಿದಿದ್ದು ಮಾತ್ರವಲ್ಲದೇ ಏರ್ಪಾಡ್ ಕೂಡ ಒಂದು ಚೂರು ಹಾನಿಗೆ ಒಳಗಾಗದೇ ರಷೆಲ್ ಕೈ ಸೇರಿದೆ. ಕೆಲ ಗಂಟೆಗಳ ಕಾಲ ಶ್ವಾನದ ಹೊಟ್ಟೆಯಲ್ಲಿ ಇದ್ದು ಬಂದ ಬಳಿಕವೂ ಈ ಏರ್ಪಾಡ್ ಸರಿಯಾಗೇ ಕಾರ್ಯ ನಿರ್ವಹಿಸುತ್ತಿದೆ. ಬ್ಯಾಟರಿಯಲ್ಲಿರುವ ಆಸಿಡ್ ಅಂಶ ಶ್ವಾನದ ಆರೋಗ್ಯಕ್ಕೆ ತುಂಬಾ ದೊಡ್ಡ ಮಟ್ಟದಲ್ಲಿ ಹಾನಿ ತಂದೊಡ್ಡಬಹುದು . ಹೀಗಾಗಿ ಮಾಲೀಕರು ಈ ವಿಚಾರದಲ್ಲಿ ಆದಷ್ಟು ಜಾಗ್ರತೆ ವಹಿಸಿ ಅಂತಾ ಸುಸಾನ ಹೇಳಿದ್ದಾರೆ.