ನವದೆಹಲಿ: ದೇಶದಲ್ಲಿ ಕೊರೋನಾ ಸೋಂಕಿತರಿಗೆ ಜೀವದ್ರವ್ಯವೆಂದೇ ಹೇಳಲಾಗುವ ರೆಮ್ ಡೆಸಿವಿರ್ ಗೆ ಬೇಡಿಕೆ ಹೆಚ್ಚಾಗಿದೆ.
ಇದೇ ವೇಳೆ ಕೇಂದ್ರ ಗೃಹಸಚಿವ ಅಮಿತ್ ಶಾ ಅವರು, ಭಯದಿಂದ ಜನರು ರೆಮ್ ಡೆಸಿವಿರ್ ಔಷಧ ಖರೀದಿಸಬಾರದು ಎಂದು ತಿಳಿಸಿದ್ದಾರೆ.
ವೈದ್ಯರ ಸಲಹೆ ಪಡೆದು ರೆಮ್ ಡೆಸಿವಿರ್ ಔಷಧ ತೆಗೆದುಕೊಳ್ಳಿ. ವಿದೇಶಗಳಿಗೆ ರೆಮ್ ಡೆಸಿವಿರ್ ಔಷಧ ರಫ್ತು ಮಾಡುವುದನ್ನು ನಿಲ್ಲಿಸಲಾಗಿದೆ. ಕೊರೋನಾ ತಡೆಗೆ ನಿರ್ಬಂಧ ಹೇರುವ ಅಧಿಕಾರ ರಾಜ್ಯಗಳಿಗೆ ಇದೆ ಎಂದು ಟ್ವೀಟ್ ಮಾಡಿದ್ದಾರೆ.
ದೇಶದಲ್ಲಿ ರೆಮ್ ಡೆಸಿವಿರ್ ಉತ್ಪಾದನೆಯು ಸಾಕಷ್ಟು ಪ್ರಮಾಣದಲ್ಲಿ ನಡೆಯುತ್ತಿದೆ, ಮುನ್ನೆಚ್ಚರಿಕೆ ಕ್ರಮವಾಗಿ ರಫ್ತು ಮಾಡುವುದನ್ನು ನಿಷೇಧಿಸಿದ್ದೇವೆ. ಆದರೆ, ಜನರು ಪ್ಯಾನಿಕ್ ಗೆ ಒಳಗಾಗಿ ಖರೀದಿಗೆ ಹೋಗುತ್ತಾರೆ, ಇದರಿಂದ ಕೊರತೆ ಉಂಟಾಗುತ್ತದೆ. ವೈದ್ಯರು ಹೇಳಿದ್ದರೆ ಮಾತ್ರ ಈ ಇಂಜೆಕ್ಷನ್ ತೆಗೆದುಕೊಳ್ಳುವಂತೆ ನಾನು ಎಲ್ಲರಿಗೂ ಮನವಿ ಮಾಡುತ್ತೇನೆ ಎಂದು ಅವರು ತಿಳಿಸಿದ್ದಾರೆ.