ಇಂದು ಈ ವರ್ಷದ ಮೊದಲ ಹಾಗೂ ಕೊನೆಯ ಸೋಮಾವತಿ ಅಮವಾಸ್ಯೆ. ಹಿಂದೂ ಪಂಚಾಂಗದಲ್ಲಿ ಈ ದಿನಕ್ಕೆ ತುಂಬಾನೇ ಮಹತ್ವವಿದೆ. ಹರಿದ್ವಾರದಲ್ಲಿ ಮಹಾಕುಂಭ ಮೇಳ ನಡೆಯುತ್ತಿದ್ದು ಲಕ್ಷಗಟ್ಟಲೇ ಭಕ್ತಾದಿಗಳು ಆಗಮಿಸಿದ್ದಾರೆ.
ಹರ್ ಕಿ ಪೌರಿ ಘಾಟ್ನಲ್ಲಿ ಸೂರ್ಯ ದೇವರಿಗೆ ಪ್ರಾರ್ಥನೆ ಸಲ್ಲಿಸಲು ಹಾಗೂ ಪವಿತ್ರ ಸ್ನಾನ ಮಾಡಲು ಲಕ್ಷಾಂತರ ಮಂದಿ ಸೇರಿದ್ದಾರೆ. ಕೊರೊನಾದಿಂದಾಗಿ ಸಾಕಷ್ಟು ನಿರ್ಬಂಧಗಳನ್ನ ಹೇರಲಾಗಿದೆ. ಬೆಳಗ್ಗೆ 7ಗಂಟೆಯವರೆಗೆ ಒಳಗೆ ಬರಲು ಯಾತ್ರಾರ್ಥಿಗಳಿಗೆ ಪೊಲೀಸರು ಅವಕಾಶ ನೀಡಿದ್ದಾರೆ. ಇದಾದ ಬಳಿಕ ಅಘೋರಿಗಳಿಗೆ ಮಾತ್ರ ಪ್ರವೇಶಕ್ಕೆ ಅವಕಾಶವಿದೆ.
ಕೊರೊನಾ ಮಾರ್ಗಸೂಚಿಗಳನ್ನ ಪಾಲಿಸುವಂತೆ ಭಕ್ತಾದಿಗಳ ಬಳಿ ನಾವು ಮನವಿ ಮಾಡಿಕೊಳ್ಳುತ್ತಲೇ ಇದ್ದೇವೆ. ಆದರೆ ಸಿಕ್ಕಾಪಟ್ಟೆ ಜನರು ಸೇರಿರೋದ್ರಿಂದ ಚಲನ್ ನೀಡಲು ಸಾಧ್ಯವಾಗುತ್ತಿಲ್ಲ. ಘಾಟ್ನಲ್ಲಿ ಸಾಮಾಜಿಕ ಅಂತರವನ್ನ ಕಾಪಾಡಲು ಆಗುತ್ತಿಲ್ಲ ಎಂದು ಕುಂಭ ಮೇಳ ಐಜಿ ಸಂಜಯ್ ಗುಂಜ್ಯಾಲ್ ಹೇಳಿದ್ದಾರೆ.