ಸಾಮಾನ್ಯವಾಗಿ ಮಕ್ಕಳ ಮುಖ ತಂದೆಗೋ ಇಲ್ಲ ತಾಯಿಯ ಮುಖಚರ್ಯೆಗೋ ಹೋಲಿಕೆ ಆಗೋದು ಸಹಜ. ಆದರೆ ಇಲ್ಲೊಬ್ಬ ಯುವತಿಯ ಅರ್ಧ ಮುಖ ತಂದೆಯ ಮುಖದಂತಿದ್ದರೆ ಇನ್ನರ್ಧ ಮುಖಕ್ಕೆ ತಾಯಿಯ ಹೋಲಿಕೆ ಇದೆ. ಯುವತಿ ತನ್ನ ಮುಖವನ್ನ ಟಿಕ್ಟಾಕ್ನಲ್ಲಿ ಶೇರ್ ಮಾಡಿದ್ದಾರೆ.
@proudmanholdingfish ಟಿಕ್ಟಾಕ್ ಖಾತೆಯಲ್ಲಿ ಯುವತಿ ತನ್ನ ತಂದೆ ತಾಯಿ ಮುಖವನ್ನ ಶೇರ್ ಮಾಡಿದ್ದಾರೆ. ಹಾಗೂ ತನ್ನ ಮುಖವನ್ನ ಹೋಲಿಕೆ ಮಾಡಿ ತೋರಿಸಿದ್ದಾರೆ. ಆಕೆಯ ಅರ್ಧ ಮುಖ ತಾಯಿಯ ಹೋಲಿಕೆಯನ್ನ ಪಡೆದಿದ್ದರೆ ಇನ್ನರ್ಧ ಮುಖ ತಂದೆಯ ರೀತಿಯೇ ಇದೆ.
ಯುವತಿ ಈ ಫೋಟೋ ಶೇರ್ ಮಾಡಿದ ಬಳಿಕ ಅನೇಕರು ತಮಗಾದ ಇಂತಹ ಅನುಭವವನ್ನ ಕಮೆಂಟ್ ವಿಭಾಗದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ತಮ್ಮ ಮುಖವೂ ಹೀಗೆ ತಂದೆ – ತಾಯಿಗೆ ಯಾವ ರೀತಿಯಲ್ಲಿ ಹೋಲಿಕೆ ಹೊಂದಿದೆ ಅನ್ನೋದನ್ನ ಹೇಳಿಕೊಂಡಿದ್ದಾರೆ.