ಅದಾಗ ತಾನೇ ಶಾಲೆಗೆ ಹೊರಡುವ ಹಾದಿಯಲ್ಲಿ ಸಣ್ಣದೊಂದು ನಿದ್ರೆ ಮಾಡುತ್ತಿದ್ದ ವರ್ಜೀನಿಯಾದ 15 ವರ್ಷದ ಶಾಲಾ ಬಾಲಕ ಬ್ರೆಂಡನ್ ಮಾರ್ಟಿನ್ ತಾನು ಕುಳಿತಿದ್ದ ಶಾಲಾ ಬಸ್ನ ವಿಂಡ್ಶೀಲ್ಡ್ ಮೂಲಕ ಹಾರಿ ಬಂದ ಜಿಂಕೆಯೊಂದನ್ನು ಕಂಡು ಬೆಚ್ಚಿ ಬಿದ್ದಿದ್ದಾನೆ.
ಈ ಶಾಕಿಂಗ್ ಘಟನೆಯನ್ನು ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಲಾಗಿದೆ.
ಘೋರ ದುರಂತ: ಅಪಘಾತ ದೃಶ್ಯ ನೋಡುತ್ತಾ ನಿಂತವರ ಮೇಲೆ ಲಾರಿ ಹರಿದು ಇಬ್ಬರು ಸ್ಥಳದಲ್ಲೇ ಸಾವು
ಮಾರ್ಟಿನ್ ಹಾಗೂ ಬಸ್ ಚಾಲಕರಿಬ್ಬರಿಗೂ ಸಹ ಈ ಘಟನೆಯಿಂದ ಶಾಕ್ ಆಗಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಕ್ಷಣಗಳ ಬಳಿಕ ಬಸ್ ಬಾಗಿಲು ತೆರೆದ ಚಾಲಕ ಜಿಂಕೆಯನ್ನು ಹೊರ ಹೋಗಲು ಬಿಟ್ಟಿದ್ದಾನೆ.
https://www.facebook.com/watch/?v=465683918562539&t=3