ರೈಲ್ವೆ ಟ್ರ್ಯಾಕ್ ಮೇಲೆ ಜಗಳವಾಡುತ್ತಿದ್ದ ಜನರ ಗುಂಪು ಕೂದಲೆಳೆ ಅಂತರದಲ್ಲಿ ರೈಲು ಅಪಘಾತದಿಂದ ಪಾರಾಗಿದ್ದು ಈ ಮೈ ಝುಂ ಎನ್ನಿಸುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
ಮಾರ್ಚ್ 24ರಂದು ಅರ್ಜೆಂಟೀನಾದ ಬ್ಯೂನಸ್ ಐರಿಸ್ನ ರಾಮೋಸ್ ಮೆಜಿಯಾ ಪಟ್ಟಣದಲ್ಲಿ ಈ ಅಘಾತಕಾರಿ ದೃಶ್ಯ ಸೆರೆಯಾಗಿದೆ.
ಜಗಳ ಆರಂಭಕ್ಕೂ ಮುನ್ನ ಹೆಚ್ಚಿನ ಸಂಖ್ಯೆಯ ಜನರು ರೈಲ್ವೆ ಹಳಿಯ ಮಧ್ಯಕ್ಕೆ ಬರ್ತಿರೋದನ್ನ ಕಾಣಬಹುದಾಗಿದೆ.
ರೈಲು ಸಮೀಪಕ್ಕೆ ಬರುತ್ತಿರುವ ಶಬ್ದ ಕೇಳಿದ್ರೂ ಸಹ ಜಗಳವನ್ನ ನಿಲ್ಲಿಸುವ ಲಕ್ಷಣ ಕಾಣೋದಿಲ್ಲ. ಈ ರೈಲು ಜಗಳ ಮಾಡುತ್ತಿದ್ದ ಗುಂಪಿನಿಂದ ಕೆಲವೇ ಇಂಚು ದೂರದಿಂದ ಹಾದುಹೋಗಿದೆ.
ಆದರೆ ಈ ಘಟನೆ ಇಲ್ಲಿಗೆ ಮುಗಿಯಲಿಲ್ಲ. ಬದಲಾಗಿ ರೈಲನ್ನ ನಿಲ್ಲಿಸಿದ ಚಾಲಕ ಯಾರಾದರೂ ಅಪಘಾತಕ್ಕೆ ಈಡಾಗಿದ್ದಾರೆಯೇ ಅನ್ನೋದನ್ನ ಸ್ಥಳಕ್ಕೆ ಬಂದು ಪರಿಶೀಲಿಸಿದ್ರು. ಕೊನೆಯಲ್ಲಿ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ.