alex Certify ರೈಲು ಅಪಘಾತದಿಂದ ಕೂದಲೆಳೆ ಅಂತರದಲ್ಲಿ ಪಾರಾದ ಜನರ ಗುಂಪು..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೈಲು ಅಪಘಾತದಿಂದ ಕೂದಲೆಳೆ ಅಂತರದಲ್ಲಿ ಪಾರಾದ ಜನರ ಗುಂಪು..!

ರೈಲ್ವೆ ಟ್ರ್ಯಾಕ್​ ಮೇಲೆ ಜಗಳವಾಡುತ್ತಿದ್ದ ಜನರ ಗುಂಪು ಕೂದಲೆಳೆ ಅಂತರದಲ್ಲಿ ರೈಲು ಅಪಘಾತದಿಂದ ಪಾರಾಗಿದ್ದು ಈ ಮೈ ಝುಂ ಎನ್ನಿಸುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ವೈರಲ್​ ಆಗಿದೆ.

ಮಾರ್ಚ್ 24ರಂದು ಅರ್ಜೆಂಟೀನಾದ ಬ್ಯೂನಸ್​ ಐರಿಸ್​​ನ ರಾಮೋಸ್​ ಮೆಜಿಯಾ ಪಟ್ಟಣದಲ್ಲಿ ಈ ಅಘಾತಕಾರಿ ದೃಶ್ಯ ಸೆರೆಯಾಗಿದೆ.

ಜಗಳ ಆರಂಭಕ್ಕೂ ಮುನ್ನ ಹೆಚ್ಚಿನ ಸಂಖ್ಯೆಯ ಜನರು ರೈಲ್ವೆ ಹಳಿಯ ಮಧ್ಯಕ್ಕೆ ಬರ್ತಿರೋದನ್ನ ಕಾಣಬಹುದಾಗಿದೆ.

ರೈಲು ಸಮೀಪಕ್ಕೆ ಬರುತ್ತಿರುವ ಶಬ್ದ ಕೇಳಿದ್ರೂ ಸಹ ಜಗಳವನ್ನ ನಿಲ್ಲಿಸುವ ಲಕ್ಷಣ ಕಾಣೋದಿಲ್ಲ. ಈ ರೈಲು ಜಗಳ ಮಾಡುತ್ತಿದ್ದ ಗುಂಪಿನಿಂದ ಕೆಲವೇ ಇಂಚು ದೂರದಿಂದ ಹಾದುಹೋಗಿದೆ.

ಆದರೆ ಈ ಘಟನೆ ಇಲ್ಲಿಗೆ ಮುಗಿಯಲಿಲ್ಲ. ಬದಲಾಗಿ ರೈಲನ್ನ ನಿಲ್ಲಿಸಿದ ಚಾಲಕ ಯಾರಾದರೂ ಅಪಘಾತಕ್ಕೆ ಈಡಾಗಿದ್ದಾರೆಯೇ ಅನ್ನೋದನ್ನ ಸ್ಥಳಕ್ಕೆ ಬಂದು ಪರಿಶೀಲಿಸಿದ್ರು. ಕೊನೆಯಲ್ಲಿ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...