ಚಿಕ್ಕ ವಯಸ್ಸಿನಲ್ಲಿ ತರಗತಿಗಳಲ್ಲಿ ಮಕ್ಕಳಿಗೆ ಏನಾದರೂ ತಪ್ಪು ಮಾಡಿದ್ರೆ ಶಿಕ್ಷಕರು ಕೋಳಿ ನಡಿಗೆಯ ಶಿಕ್ಷೆ ನೀಡಿದ್ರು. ಕುಳಿತುಕೊಂಡ ಭಂಗಿಯಲ್ಲಿ ಕಾಲಿನ ಸಹಾಯದಿಂದ ನಡೆಯುವ ಈ ಶಿಕ್ಷೆ ಯಮಯಾತನೆ ನೀಡ್ತಿದ್ದಂತೂ ಸುಳ್ಳಲ್ಲ. ಇದೀಗ ಕೊರೊನಾ ಮಾರ್ಗಸೂಚಿಗಳನ್ನ ಮುರಿಯುವ ದುಷ್ಕರ್ಮಿಗಳಿಗೆ ಮುಂಬೈ ಪೊಲೀಸರು ಇದೇ ಶಿಕ್ಷೆಯನ್ನ ನೀಡ್ತಿದ್ದಾರೆ.
ದಕ್ಷಿಣ ಮುಂಬೈನ ಮರೈನ್ ಡ್ರೈವ್ಗೆ ಮಾಸ್ಕ್ ಇಲ್ಲದೇ ಪ್ರವೇಶಿಸಲೆತ್ನಿಸಿದ ಐವರಿಗೆ ಪೊಲೀಸರು ಈ ಶಿಕ್ಷೆಯನ್ನ ನೀಡಿದ್ದಾರೆ. ಸೋಮವಾರ ಮಧ್ಯಾಹ್ನ ಈ ಸಮುದ್ರದ ದಡದಲ್ಲೇ ಪೊಲೀಸರು ಈ ಶಿಕ್ಷೆ ನೀಡಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಮಾಸ್ಕ್ ಇಲ್ಲದೇ ಮರೈನ್ ಡ್ರೈವ್ಗೆ ಎಂಟ್ರಿ ನೀಡಿದ ಐವರಿಗೆ ಪೊಲೀಸರು ಕೋಳಿ ನಡಿಗೆ ಶಿಕ್ಷೆ ನೀಡಿದ್ದಾರೆ ಎಂದು ವಿಡಿಯೋಗೆ ಶೀರ್ಷಿಕೆ ನೀಡಲಾಗಿದೆ.
ಇನ್ನು ಈ ವಿಡಿಯೋಗೆ ಪ್ರತಿಕ್ರಿಯಿಸಿರುವ ಮುಂಬೈ ಪೊಲೀಸ್ ಇಲಾಖೆ, ಈ ಬಗ್ಗೆ ಹಿರಿಯ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು ಶೀಘ್ರದಲ್ಲೇ ಹೆಚ್ಚಿನ ಕಾನೂನು ಕ್ರಮಕೈಗೊಳ್ಳಲಾಗುತ್ತೆ ಎಂದು ಹೇಳಿದ್ದಾರೆ.