ಕೊರೊನಾ ವೈರಸ್ ಮಹಾಮಾರಿ ಹಾಗೂ ಲಾಕ್ಡೌನ್ನಿಂದ ಜನರಿಗೆ ಇನ್ನೂ ಸುಧಾರಿಸಿಕೊಳ್ಳೋಕೆ ಆಗುತ್ತಿಲ್ಲ. ಭಾರತದಲ್ಲಂತೂ ವಲಸೆ ಕಾರ್ಮಿಕರು ಇಂದಿಗೂ ಒಂದೊತ್ತಿನ ಊಟಕ್ಕಾಗಿ ಪರಿತಪಿಸುತ್ತಿದ್ದಾರೆ. ಬಡ ಜನರ ಈ ಕಷ್ಟವನ್ನ ಅರಿಯ ಸಮರಿತನ್ಸ್ ಪುಷ್ಪರಾಣಿ ಸಿ ಹಾಗೂ ಆಕೆಯ ಪತಿ ಚಂದ್ರಶೇಖರ್ ಬಡವರ ಕಷ್ಟಕ್ಕಾಗಿ ಮಿಡಿದಿದ್ದಾರೆ. ತಮಿಳುನಾಡಿನ ತಿರುಚಿ ನಿವಾಸಿಗಳಾದ ಈ ದಂಪತಿ ಬಡವರಿಗಾಗಿ ಸಹಾಯ ಹಸ್ತ ಚಾಚಿದ್ದಾರೆ.
ವೆಲ್ಡರ್ ಕೆಲಸ ಮಾಡೋ ಚಂದ್ರಶೇಖರ್ ಲಾಕ್ಡೌನ್ ಸಮಯದಲ್ಲಿ ಆರ್ಥಿಕ ಸಂಕಷ್ಟಕ್ಕೆ ಈಡಾಗಿದ್ರು. ಆಗಸ್ಟ್ನಲ್ಲಿ ಲಾಕ್ಡೌನ್ ಸಂಪೂರ್ಣವಾಗಿ ತೆರವಾದ ಬಳಿಕ ಬ್ಯಾಂಕಿನಲ್ಲಿ 50 ಸಾವಿರ ರೂಪಾಯಿ ಸಾಲ ಮಾಡಿ ಒಂದು ಸಣ್ಣ ಹೋಟೆಲ್ ತೆರೆದು ಇದರಲ್ಲಿ ಕೇವಲ 1 ರೂಪಾಯಿ ಆಹಾರ ನೀಡುತ್ತಿದ್ದಾರೆ.
ಆದಾಯದ ಮೂಲವಿಲ್ಲದೇ ಒಂದೊತ್ತಿನ ಊಟಕ್ಕೂ ಪರಿತಪಿಸುವ ಜನರಿಗೆ ಇಲ್ಲಿ ಆಹಾರ ನೀಡಲಾಗುತ್ತೆ. ಇಲ್ಲಿಯವರೆಗೆ ಈ ದಂಪತಿ ಪ್ರತಿ ದಿನ 400ಕ್ಕೂ ಹೆಚ್ಚು ಮಂದಿಗೆ ಊಟ ಹಾಕಿದ್ದಾರೆ. ದಂಪತಿಯ ಈ ಕಾರ್ಯಕ್ಕೆ ಇವರ ಮಕ್ಕಳು ಕೂಡ ಕೈ ಜೋಡಿಸಿದ್ದು, ಗ್ರಾಹಕರಿಗೆ ವಿವಿಧ ಆಹಾರವನ್ನ ಬಡಿಸುವ ಕಾರ್ಯ ಮಾಡ್ತಾರೆ. ಇಲ್ಲಿ ಬೆಳಗ್ಗಿನ ತಿಂಡಿಗೆ 1 ರೂಪಾಯಿ ನಿಗದಿ ಮಾಡಲಾಗಿದ್ರೆ ಮಧ್ಯಾಹ್ನದ ಊಟದ ಬೆಲೆ 5 ರೂಪಾಯಿ ಆಗಿದೆ.