ಅಯೋಧ್ಯೆಯ ರಾಮ ಜನ್ಮಭೂಮಿಯಲ್ಲಿ ದೇವಸ್ಥಾನದ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. ಇದೇ ವೇಳೆ ನಿರ್ಮಾಣ ಕಾರ್ಯಕ್ಕೆ ಬಹಳ ಅಮೂಲ್ಯವಾದ ವಸ್ತುವೊಂದನ್ನು ಬಳಸುತ್ತಿದ್ದು, ಶ್ರೀರಾಮ ಭಕ್ತರಿಗೆ ಭಾರೀ ಖುಷಿ ನೀಡುವ ಸಂಗತಿಯಾಗಿದೆ.
ಸೀತಾದೇವಿಯನ್ನು ದಿಗ್ಬಂಧಿಸಿ ಇಡಲಾಗಿದ್ದ ಶ್ರೀಲಂಕಾದ ಸೀತಾ ಎಲಿಯಾ ಎಂಬ ಜಾಗದಿಂದ ಕಲ್ಲೊಂದನ್ನು ತಂದು ಭವ್ಯ ರಾಮ ಮಂದಿರ ನಿರ್ಮಾಣದಲ್ಲಿ ಬಳಸಲಾಗುವುದು. ಇದೇ ಸೀತಾ ಎಲಿಯಾದಲ್ಲಿ ಇಂದಿಗೂ ಸಹ ಸೀತಾದೇವಿಯ ದೇಗುಲವಿದೆ. ರಾವಣ ಅಪಹರಿಸಿದ ವೇಳೆ ಸೀತಾದೇವಿಯನ್ನು ಅಲ್ಲಿ ಬಂಧಿಯಾಗಿಟ್ಟಿದ್ದ ಎನ್ನಲಾಗಿದೆ. ಇದೇ ಜಾಗದಲ್ಲಿ ಕುಳಿತು ನಿರಂತರವಾಗಿ ಪ್ರಾರ್ಥನೆ ಮಾಡುತ್ತಿದ್ದ ಸೀತಾದೇವಿ, ಶ್ರೀರಾಮಚಂದ್ರ ಬಂದು ತಮ್ಮನ್ನು ಬಂಧನದಿಂದ ಮುಕ್ತಗೊಳಿಸಲೆಂದು ಆಶಿಸುತ್ತಿದ್ದರು.
ಎದೆ ನಡುಗಿಸುವಂತಿದೆ ಹೆಲಿಕಾಪ್ಟರ್ ರೋಟರ್ ನಲ್ಲಿ ನೇತಾಡುತ್ತಿದ್ದವನ ವಿಡಿಯೋ
ಭಾರತಕ್ಕೆ ಶ್ರೀಲಂಕಾದ ರಾಯಭಾರಿಯಾಗಿ ಇರುವ ಮಿಲಿಂದ ಮೊರಾಗೊಡಾ ಅವರು ಈ ಕಲ್ಲನ್ನು ತಮ್ಮೊಂದಿಗೆ ಭಾರತಕ್ಕೆ ತರಲಿದ್ದಾರೆ.