ಕಾಲೇಜು ಕ್ಯಾಂಪಸ್ನಲ್ಲಿ ಪ್ರೇಮ ನಿವೇದನೆ ಮಾಡಿಕೊಂಡ ವಿದ್ಯಾರ್ಥಿಗಳಿಬ್ಬರು ಬಹಿರಂಗವಾಗಿ ತಬ್ಬಿಕೊಂಡ ಕಾರಣ ಪಾಕಿಸ್ತಾನದ ವಿಶ್ವವಿದ್ಯಾಲಯ ಅವರನ್ನ ಉಚ್ಚಾಟಿಸಿದೆ. ಯುವತಿ ಯುವಕನಿಗೆ ಪ್ರೇಮ ನಿವೇದನೆ ಮಾಡ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಾರೀ ಸದ್ದು ಮಾಡಿತ್ತು.
ಲಾಹೋರ್ ವಿಶ್ವ ವಿದ್ಯಾಲಯದ ವಿಶೇಷ ಶಿಸ್ತು ಸಮಿತಿ ಮಾರ್ಚ್ 12ರಂದು ಈ ವಿಚಾರವಾಗಿ ಸಭೆ ಕರೆದಿದ್ದರೂ ಸಹ ಇಬ್ಬರು ವಿದ್ಯಾರ್ಥಿಗಳು ಕಮಿಟಿ ಎದುರು ಹಾಜರಾಗುವಲ್ಲಿ ವಿಫಲರಾಗಿದ್ದಾರೆ.
ಕಮಿಟಿ ಎದುರು ಹಾಜರಾಗದ ಹಿನ್ನೆಲೆ ಹುಡುಗ ಹಾಗೂ ಹುಡುಗಿ ಇಬ್ಬರನ್ನೂ ಕ್ಯಾಂಪಸ್ನಿಂದ ಹೊರಗಟ್ಟಲಾಗಿದೆ. ಇವರಿಬ್ಬರೂ ಮಾಡಿದ ಕೆಲಸ ವಿಶ್ವವಿದ್ಯಾಲಯದ ನಿಯಮಾವಳಿಗೆ ವಿರುದ್ಧವಾಗಿದೆ ಎಂದು ಲಾಹೋರ್ ವಿಶ್ವ ವಿದ್ಯಾಲಯ ಹೇಳಿದೆ.
ಟ್ವಿಟರ್ನಲ್ಲಿ ಈ ಪ್ರೇಮ ನಿವೇದನೆಯ ವಿಡಿಯೋ ಹಲ್ಚಲ್ ಸೃಷ್ಟಿಸಿತ್ತು. ವಿಡಿಯೋದಲ್ಲಿ ವಿದ್ಯಾರ್ಥಿನಿ ಎಲ್ಲರ ಎದುರು ಮೊಣಕಾಲೂರಿ ವಿದ್ಯಾರ್ಥಿ ಬಳಿ ಪ್ರೇಮ ನಿವೇದನೆ ಮಾಡುತ್ತಾಳೆ. ಆಕೆ ನೀಡಿದ ಹೂವನ್ನ ಸ್ವೀಕರಿಸಿದ ವಿದ್ಯಾರ್ಥಿ ಆಕೆಯನ್ನ ತಬ್ಬಿಕೊಳ್ತಾನೆ. ಅಲ್ಲೇ ಹತ್ತಿರದಲ್ಲಿದ್ದ ವಿದ್ಯಾರ್ಥಿಗಳು ಇವರಿಬ್ಬರಿಗೆ ಚಿಯರ್ ಮಾಡುತ್ತಾ ವಿಡಿಯೋ ರೆಕಾರ್ಡ್ ಮಾಡಿದ್ದರು.
ಲಾಹೋರ್ ವಿಶ್ವವಿದ್ಯಾಲಯದ ಈ ಕ್ರಮ ಇಂಟರ್ನೆಟ್ನಲ್ಲಿ ಮಿಶ್ರ ಪ್ರತಿಕ್ರಿಯೆಯನ್ನ ಪಡೆಯುತ್ತಿದೆ. ಅಮಿತಾಬ್ ಬಚ್ಚನ್ ‘ಮೊಹಬ್ಬತೆ’ ಸಿನಿಮಾಗೆ ಈ ಘಟನೆಯನ್ನ ಹೋಲಿಸಿ ವಿಶ್ವವಿದ್ಯಾಲಯದ ಕ್ರಮವನ್ನ ಬೆನ್ಜಿರ್ ಬುಟ್ಟೋ ಪುತ್ರಿ ಬಖ್ತವರ್ ಬುಟ್ಟೋ ಜರ್ದಾರಿ ಟೀಕಿಸಿದ್ದಾರೆ.
ಇತ್ತ ಮಾಜಿ ಟೆಸ್ಟ್ ಕ್ರಿಕೆಟಿಗ ವಾಸಿಂ ಅಕ್ರಂ ಪತ್ನಿ ಶನೇರಾ ಅಕ್ರಂ ಕೂಡ ಟ್ವೀಟ್ ಮಾಡಿ, ನಿಮಗೆ ಯಾವುದು ಬೇಕೋ ಅದೆಲ್ಲ ನಿಯಮಗಳನ್ನ ವಿಧಿಸಿ ಆದರೆ ಪ್ರೀತಿಯನ್ನ ನಾಶ ಮಾಡೋಕೆ ನಿಮ್ಮಿಂದ ಸಾಧ್ಯವಿಲ್ಲ. ಅದು ನಮ್ಮ ಹೃದಯಲ್ಲಿದೆ. ವಿಶ್ವವಿದ್ಯಾಲಯ ಕಲಿಸದ ಎಷ್ಟೋ ಜೀವನದ ಪಾಠಗಳನ್ನ ಪ್ರೀತಿ ಕಲಿಸುತ್ತೆ ಎಂದು ಬರೆದುಕೊಂಡಿದ್ದಾರೆ.
https://twitter.com/i/status/1370428799637192713